ವಿಮಾನ ಹಾರಾಟದ ಮಾರ್ಗಮಧ್ಯದಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಬುಧವಾರ, 17 ಆಗಸ್ಟ್ 2016 (19:45 IST)
ನಗರದಿಂದ ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು ಮಾರ್ಗಮಧ್ಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ  ವಿಮಾನವನ್ನು ಮತ್ತೆ ನಿಲ್ದಾಣಕ್ಕೆ ವಾಪಸ್ ಲ್ಯಾಂಡ್ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
 
ಸೆಬು ಫೆಸಿಫಿಕ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವನ್ನು ವೈದ್ಯಕೀಯ ತುರ್ತುಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿಸಲು ಅನುಮತಿ ನೀಡಲಾಯಿತು.
 
ಫಿಲಿಪೈನ್ಸ್ ನಾಗರಿಕಳಾದ ಮಹಿಳೆ ವಿಮಾನ ಹಾರಾಟ ನಡೆಸುತ್ತಿರುವಾಗ ಮಗುವಿಗೆ ಜನ್ಮ ನೀಡಿದ್ದರಿಂದ ವಿಮಾನ ಅಧಿಕಾರಿಗಳು ವೈದ್ಯಕೀಯ ನೆರವು ನೀಡಲು ಹೈದ್ರಾಬಾದ್‌ಗೆ ಮರಳಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ