ಮೆಕ್ಸಿಕೋ : ಜಿಮ್‌ನಲ್ಲಿ ಬೇರ್ಬೆಲ್ ಕುಸಿದು ಮಗಳ ಮುಂದೆಯೇ ಮಹಿಳೆ ಸಾವಿಗೀಡಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
180 ಕೆಜಿ ಭಾರದ ತೂಕ ಎತ್ತುವ ವೇಳೆ ಅದು ಮಹಿಳೆಯ ಕುತ್ತಿಗೆ ಮೇಲೆಯೇ ಬಿದ್ದು ಈ ಅನಾಹುತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಹಿಳೆಯ ಪುಟ್ಟ ಮಗಳು ಇದ್ದಳು. ಈ ದುರಂತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತಪಟ್ಟವರು ಮೆಕ್ಸಿಕನ್ ಮಹಿಳೆಯಾಗಿದ್ದು, ಅವರ ಹೆಸರು ತಿಳಿದು ಬಂದಿಲ್ಲ. ತಮ್ಮ ಪುತ್ರಿಯೊಂದಿಗೆ ಜಿಮ್ಗೆ ಬಂದು ವ್ಯಾಯಾಮ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಇತರರೆಲ್ಲರೂ ಸ್ಥಳಕ್ಕೆ ಓಡಿ ಬಂದು ಮಹಿಳೆಯ ರಕ್ಷಣೆಗೆ ಯತ್ನಿಸುತ್ತಾರೆ.
ಆದರೆ ಅಷ್ಟರಲ್ಲಾಗಲ್ಲೇ ಅತೀಯಾದ ಭಾರ ಆಕೆಯ ಕುತ್ತಿಗೆಯ ಮೇಲೆ ಬಿದ್ದು ಆಕೆ ಸಾವನ್ನಪ್ಪಿದ್ದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಎಲ್ಲರೂ ಶಾಕ್ಗೆ ಒಳಗಾಗಿದ್ದರೆ ಓರ್ವ ವ್ಯಕ್ತಿ ಆಕೆಯನ್ನು ಎಳೆಯಲೂ ಪ್ರಯತ್ನಿಸುವುದನ್ನು ನೋಡಬಹುದು.
ಫೆಬ್ರವರಿ 21ರಂದು ಮೆಕ್ಸಿಕೋ ನಗರದಲ್ಲಿರುವ ಜಿಮ್ ಫಿಟ್ನೆಸ್ ಸ್ಪೋರ್ಟ್ಸ್ ಜಿಮ್ನಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ಅಂದಾಜು 35 ರಿಂದ 40 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದೆ.
ಆಕೆ ಸಾವಿಗೀಡಾಗುವ ಮೊದಲು 180 ಕೆಜಿ ತೂಕ ಎತ್ತಲು ಆಕೆ ಮುಂದಾಗಿದ್ದು, ಇದಕ್ಕೂ ಮೊದಲು ಧಡೂತಿ ದೇಹದ ವ್ಯಕ್ತಿಯೊರ್ವ ಬೇರ್ಬೆಲ್ನ ತೂಕವನ್ನು ಸರಿ ಹೊಂದಿಸುತ್ತಿರುವುದು ವಿಡಿಯೋದಲ್ಲಿದೆ. ಆದರೆ ಮಹಿಳೆ ಭಾರ ಎತ್ತಲು ತನ್ನ ಕುತ್ತಿಗೆಯನ್ನು ಬೇರ್ಬೆಲ್ ಕೆಳಭಾಗದಲ್ಲಿ ನುಗ್ಗಿಸಿದ ಕೆಲ ಕ್ಷಣದಲ್ಲೇ ಅದು ಆಕೆಯ ಮೇಲೆ ಬೀಳುತ್ತದೆ.