1 ಕೋಟಿ ವಿಮೆ ಹಣ ಪಡೆಯಲು ಮಹಿಳೆ ಮಾಡಿದ ಡ್ರಾಮ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಸೋಮವಾರ, 27 ನವೆಂಬರ್ 2017 (19:44 IST)
ಖಾಸಗಿ ವಿಮಾ ಕಂಪೆನಿಯಿಂದ ರೂ. 1 ಕೋಟಿ ರೂ ವಂಚಿಸಲು ತನ್ನನ್ನು ತಾನು "ಸತ್ತವಳು" ಎಂದು ಘೋಷಿಸಿಕೊಂಡ 35 ವರ್ಷ ವಯಸ್ಸಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
 
ಖಾಸಗಿ ವಿಮಾ ಕಂಪೆನಿಯ ದಕ್ಷ ಅಧಿಕಾರಿಗಳ ಜಾಣ್ಮೆಯಿಂದಾಗಿ ಮಹಿಳೆ ಜೀವಂತವಾಗಿರುವುದು ಪತ್ತೆಯಾಗಿದ್ದು ಆಕೆಯ ವಂಚನೆ ಬಯಲಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ರಿಯಲ್ ಎಸ್ಟೇಟ್ ಏಜೆಂಟ್ ವೃತ್ತಿಯಲ್ಲಿರುವ ಮಹಿಳಾ ಪತಿ ಸೈಯದ್ ಶಕೀಲ್ ಆಲಂ, ತನ್ನ ಹೆಂಡತಿ ಮೃತಪಟ್ಟಿದ್ದಾಳೆ ಎಂದು ವಿಮಾ ಕಂಪೆನಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ.
 
ಮಹಿಳೆಯ ಪತಿ ಆಲಂ, 2012 ರಲ್ಲಿ ಪತ್ನಿ ಹೆಸರಿನಲ್ಲಿ 1 ಕೋಟಿ ರೂ. ವಿಮಾ ಪಾಲಿಸಿ ಮಾಡಿಸಿದ್ದು ವಾರ್ಷಿಕ 11,800 ರೂ. ಪ್ರೀಮಿಯಂ ಭರಿಸುತ್ತಿದ್ದನು ಎನ್ನಲಾಗಿದೆ. 
 
ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ತನ್ನ ಹೆಂಡತಿ ಎದೆ ನೋವಿನಿಂದಾಗಿ ಮೃತಪಟ್ಟಿದ್ದಾಳೆ ಎಂದು ಹೇಳುವ ವಿಮೆ ಹಕ್ಕು ಸಲ್ಲಿಸಿದ್ದನು ಆದರೆ, ಅಲಾಮ್ ಮತ್ತೊಂದು ಮಹಿಳೆ ಮರಣದ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ. ನಕಲಿ ವೈದ್ಯಕೀಯ ದಾಖಲೆಗಳು, ನಕಲಿ ಪ್ರಮಾಣಪತ್ರಗಳು ನಗರಸಭೆಯಿಂದ ಮರಣ ಪ್ರಮಾಣಪತ್ರವನ್ನು ಸಹ ಪಡೆದಿದ್ದ ಎಂದು ಪೊಲೀಸ್ ಅಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
 
ವಿಮಾ ಪಾಲಿಸಿ ಹೊಂದಿರುವ ಮಹಿಳೆ ಜೀವಂತವಾಗಿರುವುದು ಖಚಿತಪಡಿಸಿಕೊಂಡ ವಿಮೆ ಕಂಪೆನಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಆರೋಪಿ ದಂಪತಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ