ಮಹಿಳೆಯರಿಗೊಂದು ಬಂದಿದೆ ಹೊಸ ವಯಾಗ್ರ?

ಭಾನುವಾರ, 26 ನವೆಂಬರ್ 2017 (18:18 IST)
ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಫ್ಲಿಬನ್‌ಸೆರಿನ್ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಕೆರಳಿಸುವಲ್ಲಿ ಸಹಾಯಕ ಎಂಬುದಾಗಿ ಪ್ರತ್ಯೇಕ ಮೂರು ಅಧ್ಯಯನಗಳು ತಿಳಿಸಿವೆ. ಹಾಗಾಗಿ ಇದು ಮಹಿಳಾ ವಯಾಗ್ರದಂತೆ ಕಾರ್ಯಾಚರಿಸುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ.
 
ಇದು ಮೊತ್ತ ಮೊದಲಬಾರಿಗೆ ನಡೆಸಿರುವ ಪರೀಕ್ಷೆಯಾಗಿದೆ. ಈ ಚಿಕಿತ್ಸೆಯು ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುವ ಮಹಿಳೆಯರಲ್ಲಿ ಮೆದುಳಿನ ಸಮಕ್ಕೆ ಲೈಂಗಿಕ ಪ್ರಚೋದನೆ ಮಾಡುತ್ತದೆ ಎಂಬುದಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ಜಾನ್ ಎಂ. ತ್ರಾಪ್ ಹೇಳಿದ್ದಾರೆ.
 
ಪ್ರತಿನಿತ್ಯ ಒಂದು ಬಾರಿಗೆ 100 ಎಂಜಿ ಫ್ಲಿಬನ್‌ಸೆರಿನ್ ಸೇವಿಸಿದರೆ ಇದು ಕಾಮಾಸಕ್ತಿ ಹಾಗೂ ಲೈಂಗಿಕ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ ಎಂಬುದಾಗಿ ಈ ಕುರಿತ ಪರಿಕ್ಷಾ ಫಲಿತಾಂಶಗಳು ಹೇಳಿವೆ.
 
"ಫ್ಲಿಬನ್‌ಸೆರಿನ್ ಒಂದು ಸಾಮಾನ್ಯ ಖಿನ್ನತಾ ವಿರೋಧಿ ಔಷಧಿ" ಎಂದು ಹೇಳಿರುವ ತ್ರಾಪ್ ಇದು ಪ್ರಯೋಗಪಶುಗಳು ಹಾಗೂ ಮಾನವರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಿರುವ ಕುರಿತ ಅಂಶ ಬೆಳಕಿಗೆ ಬಂದಿದ್ದು ಬಳಿಕ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
 
ಈ ಹಿನ್ನೆಲೆಯಲ್ಲಿ ಹಲವಾರು ಕ್ಲಿನಿಕಲ್ ಪ್ರಯೋಗಗಳನ್ನು ಮಾಡಲಾಗಿದ್ದು, ಅತ್ಯಂತ ಕ್ಷೀಣ ಲೈಂಗಿಕ ಇಚ್ಚೆ ಹೊಂದಿದ್ದ ಮಹಿಳೆಯರಲ್ಲಿ ಗಣನೀಯ ಸುಧಾರಣೆಯನ್ನು ತೋರಿದ್ದು, ಇವರಲ್ಲಿ ಕಾಮ ವಾಂಛೆ ಹಾಗೂ ಲೈಂಗಿಕ ತೃಪ್ತಿಯನ್ನು ಹೆಚ್ಚಿಸಿದೆ ಎಂದು ತ್ರಾಪ್ ಹೇಳಿದ್ದಾರೆ.
 
ಪುರುಷರಲ್ಲಿ ಉದ್ರೇಕದ ಸಮಸ್ಯೆ ಇರುವಂತೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಇಲ್ಲದಿರುವುದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದ್ದು, ಇಂತಹ ಮಹಿಳೆಯರಲ್ಲಿ ಇದು ವಯಾಗ್ರದಂತೆ ಕಾರ್ಯವೆಸಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
 
ಫ್ಲಿಬನ್‌ಸೆರಿನ್ ಪ್ರಸಕ್ತ ಪ್ರಯೋಗಶೀಲ ಔಷಧಿಯಾಗಿದ್ದು, ಇದು ಕ್ಲಿನಿಕಲ್ ಪರೀಕ್ಷೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಮಾತ್ರ ಲಭ್ಯವಿದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಹೇಳಿಕೆ ತಿಳಿಸಿದೆ.
 
18ಕ್ಕಿಂತ ಹೆಚ್ಚು ವಯಸ್ಸಿನ ಹಾಗೂ ಮುಟ್ಟುನಿಲ್ಲದ 1,946 ಮಹಿಳೆಯರನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದು ಅವರಲ್ಲಿ ಫ್ಲಿಬನ್‌ಸೆರಿನ್ ಅಥವಾ ಪ್ಲೆಸೆಬೋ ಔಷಧಿಯನ್ನು 24ವಾರಗಳ ಕಾಲ, ನಾಲ್ಕುವಾರಗಳ ಕಾಲ ಚಿಕಿತ್ಸಾಪೂರ್ವ ಹಾಗೂ ನಾಲ್ಕುವಾರಗಳ ಕಾಲ ಚಿಕಿತ್ಸಾ ನಂತರದಲ್ಲಿ ಸೇವಿಸಲು ಹೇಳಲಾಗಿತ್ತು.
 
ಈ ಚಿಕಿತ್ಸೆಯ ಫಲಿತಾಂಶವನ್ನು ಫ್ರಾನ್ಸಿನ ಸೊಸೈಟಿ ಫಾರ್ ಸೆಕ್ಷುವಲ್ ಮೆಡಿಸಿನ್ ಇನ್ ಲಿಯಾನ್‌ನ ಕಾಂಗ್ರೆಸ್‌‍ನಲ್ಲಿ ಪ್ರಸ್ತುತ ಪಡಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ