ಮಗು ಮಾಡಿಕೊಳ್ಳುವ ಆಸೆಗೆ ಹೀಗೆಲ್ಲಾ ಮಾಡೋದಾ?!
ಇದರಿಂದಾಗಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಈಕೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಎರಡು ವರ್ಷಗಳಿಂದ ಮಕ್ಕಳನ್ನು ಪಡೆಯಲು ನಾಟಿ ವೈದ್ಯರ ಮದ್ದು ಮಾಡುತ್ತಿದ್ದರು.
ಅದರಂತೆ ಮಗುವಿನ ಹೊಕ್ಕುಳ ಬಳ್ಳಿ ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಈ ಸಂಬಂಧ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಈಕೆಗೆ ಹೊಕ್ಕುಳ ಬಳ್ಳಿ ಸೇವಿಸಲು ಸಲಹೆ ನೀಡಿದವರು ಯಾರು ಎಂಬುದು ಬಯಲಾಗಬೇಕಿದೆ.