ಅಪ್ರಾಪ್ತೆಯಾಗಿದ್ದಾಗ ಅತ್ಯಾಚಾರವಾಗಿತ್ತೆಂದು 27 ವರ್ಷಗಳ ಬಳಿಕ ಕೇಸ್ ದಾಖಲಿಸಿದ ಮಹಿಳೆ!
ತನಗಾಗ 13 ವರ್ಷವಾಗಿತ್ತು. ಅಕ್ಕನ ಮನೆಗೆ ಹೋಗಿದ್ದಾಗ ಬಾವನ ಕಾರು ಚಾಲಕ ಮತ್ತು ಆತನ ಸಹೋದರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮೇಲೆ ಅತ್ಯಾಚಾರವೆಸಗಿದ್ದರು. ಪರಿಣಾಮ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮವಿತ್ತಿದ್ದೆ. ಆ ಮಗುವನ್ನು ಮಕ್ಕಳಿಲ್ಲದ ದಂಪತಿಯೊಬ್ಬರಿಗೆ ನೀಡಿದ್ದೆ.
ಇದಾದ ಬಳಿಕ ತನ್ನ ಮದುವೆಯಾಗಿತ್ತು. ಮದುವೆಯಾಗಿ 10 ವರ್ಷದ ಬಳಿಕ ಗಂಡನಿಗೆ ಈ ಹಿಂದೆ ನಡೆದಿದ್ದ ಘಟನೆ ತಿಳಿಯಿತು. ಹೀಗಾಗಿ ಗಂಡ ಮದುವೆ ಮುರಿದುಕೊಂಡ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಇದೀಗ ಪೊಲೀಸರು ಡಿಎನ್ ಎ ಪರೀಕ್ಷೆ ನಡೆಸಿ ಸಾಕ್ಷ್ಯ ಕಲೆ ಹಾಕಿದ್ದಾರೆ.