ಹಳೇ ಗರ್ಲ್ ಫ್ರೆಂಡ್ ಕಾರಿನಲ್ಲಿ ಜಿಪಿಎಸ್ ಇಟ್ಟು ಪ್ರಿಯಕರನ ಕಿರುಕುಳ

ಬುಧವಾರ, 2 ಮಾರ್ಚ್ 2022 (09:20 IST)
ನವದೆಹಲಿ: ಪ್ರೇಯಸಿ ಕೈ ಕೊಟ್ಟಿದ್ದಕ್ಕೆ ಆಕ್ರೋಶಗೊಂಡಿದ್ದ ವ್ಯಕ್ತಿ ಆಕೆಯ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಇಟ್ಟು ಕಿರುಕುಳ ನೀಡುತ್ತಿದ್ದ. ಈತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

47 ವರ್ಷದ ಆರೋಪಿ ಬಂಧಿತ. ಈತ ಈ ಮೊದಲು ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ. ಆದರೆ ಆಕೆ ಉದ್ಯೋಗ ಬದಲಾಯಿಸಿದ್ದು, ಇವರಿಬ್ಬರ ಪ್ರೇಮ ಸಂಬಂಧವೂ ಮುರಿದುಬಿತ್ತು. ಆದರೆ ಇಷ್ಟಕ್ಕೇ ಸುಮ್ಮನಾಗದ ಪ್ರಿಯಕರ ಆಕೆಗೆ ಕಿರುಕುಳ ನೀಡಲಾರಂಭಿಸಿದ್ದ.

ಕಾರಿನಲ್ಲಿ ಜಿಪಿಎಸ್ ಇರಿಸಿದ್ದಲ್ಲದೆ, ಮಹಿಳೆಯ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣದ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ ಹಾಕಿ ಕಿರುಕುಳ ನೀಡುತ್ತಿದ್ದ. ಈತನ ಕಿರುಕುಳ ತಾಳಲಾರದೇ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ