ಭೋಪಾಲ್: ಮಹಿಳೆಯ ಮೇಲೆ ಗಂಡ, ಅತ್ತೆ, ಮಾವ ಸೇರಿಕೊಂಡು ಖಾಸಗಿ ಅಂಗಾಂಗಕ್ಕೆ ಖಾರದ ಪುಡಿ, ರಾಡ್ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹಿಳೆಯ ಬಳಿ ಓರ್ವ ಸ್ಟೀಮ್ ಮೆಷಿನ್ ಬೇಕೆಂದು ಸಹಾಯ ಕೇಳಿಕೊಂಡು ಬಂದಿದ್ದ. ಆತನನ್ನು ಹೊರಗೆ ನಿಲ್ಲುವಂತೆ ಹೇಳಿ ಮಹಿಳೆ ಮನೆಯೊಳಗೆ ಹೋಗಿ ವಸ್ತು ತೆಗೆದುಕೊಂಡು ಬರಲು ಹೋದಾಗ ಹಿಂದೆಯೇ ಬಂದಿದ್ದ ಆತ ಕಿರುಕುಳ ನೀಡಿದ್ದ.
ಆದರೆ ಇದನ್ನು ತಪ್ಪಾಗಿ ಗ್ರಹಿಸಿದ ಅತ್ತೆ-ಮಾವ ಗಂಡನ ಬಳಿ ದೂರು ಹೇಳಿದ್ದರು. ಆಕೆಗೆ ಆ ಯುವಕನೊಂದಿಗೆ ಸಂಬಂಧ ಕಲ್ಪಿಸಿ ಇನ್ನಿಲ್ಲದ ಹಿಂಸೆ ನೀಡಿದ್ದಾರೆ. ಗಂಡ, ಅತ್ತೆ-ಮಾವ ಸೇರಿಕೊಂಡು ಆಕೆಯನ್ನು ಬೆತ್ತಲೆಗೊಳಿಸಿದ್ದಾರೆ. ಗಂಡ ಖಾಸಗಿ ಅಂಗಾಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಅತ್ತೆ ಬಿಸಿ ರಾಡ್ ನಿಂದ ತೊಡೆ, ಖಾಸಗಿ ಅಂಗಾಂಗಕ್ಕೆ ಬರೆ ಹಾಕಿದ್ದಾಳೆ. ಬಳಿಕ ಮಾವ ಖಾರದ ಪುಡಿ ಹಾಕಿ ಇನ್ನಷ್ಟು ಹಿಂಸೆ ನೀಡಿದ್ದಾರೆ.
ಇದೀಗ ಮಹಿಳೆ ತನ್ನ ಗಂಡ, ಅತ್ತೆ-ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು, ಮಹಿಳೆಯ ಮೇಲೆ ಹಲ್ಲೆ, ಅತ್ಯಾಚಾರ ಸೆಕ್ಷನ್ ಗಳಡಿಯಲ್ಲಿ ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.