ಲವ್ವರ್ ಜೊತೆ ಓಡಿ ಹೋದ ಮಹಿಳೆಗೆ ಇದೆಂಥಾ ಶಿಕ್ಷೆ!

ಭಾನುವಾರ, 14 ನವೆಂಬರ್ 2021 (10:31 IST)
ಗುಜರಾತ್: ಪ್ರಿಯಕರನ ಜೊತೆ ಓಡಿ ಹೋದ ತಪ್ಪಿಗೆ ಮಹಿಳೆಗೆ ಚಿತ್ರಹಿಂಸೆ ನೀಡಿದ ಘಟನೆ ಗುಜರಾತ್ ನಲ್ಲಿ ನಡೆದಿದ್ದು,  ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಹಿಳೆ ಈ ರೀತಿ ಪ್ರಿಯಕರನ ಜೊತೆ ಓಡಿ ಹೋಗಿದ್ದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬಂತು ಎನ್ನುವುದು ಗ್ರಾಮಸ್ಥರ ದೂರು. ಇದಕ್ಕಾಗಿ ಮಹಿಳೆಯ ಕೇಶ ಮುಂಡನ ಮಾಡಿಸಿ ಮುಖಕ್ಕೆ ಮಸಿ ಬಳಿದು ಚಿತ್ರಹಿಂಸೆ ನೀಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ತಕ್ಷಣವೇ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ