13 ತುಂಡುಗಳಾಗಿ ಕತ್ತರಿಸಿದ ಮಹಿಳೆಯ ಮೃತ ದೇಹ ಪತ್ತೆ

ಗುರುವಾರ, 29 ಡಿಸೆಂಬರ್ 2016 (16:30 IST)
ಮೂರು ಪ್ಲ್ಯಾಸ್ಟಿಕ್ ಬ್ಯಾಗ್‌ಗಳಲ್ಲಿ 13 ತುಂಡುಗಳಾಗಿ ಕತ್ತರಿಸಿದ ಮಹಿಳೆಯ ಮೃತ ದೇಹ ಪನ್ವೇಲ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಮಹಿಳೆಯ ಮೃತದೇಹ ಗುರುತಿಸಲು ಅಸಾಧ್ಯವಾಗಿದ್ದು, ಆಕೆಯ ಕೈ, ಕಾಲು ಮತ್ತು ತಲೆಯನ್ನು ಬೇರೆ ಬೇರೆಯಾಗಿ ಮಾಡಲಾಗಿದೆ. ಮೃತ ದೇಹವನ್ನು ಪಶ್ಚಿಮ ಪನ್ವೇಲ್‌ನ ಖಾಂಡಾ ಕಾಲೋನಿಯಲ್ಲಿರುವ ಗ್ಯಾರೇಜ್‌ನಲ್ಲಿ ಪತ್ತೆಯಾಗಿದೆ.
 
ಗ್ಯಾರೇಜ್‌ನ ಕಾರ್ಮಿಕರು ಮೃತದೇಹದ ಭಾಗಗಳನ್ನು ಕಂಡು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ.   
 
ಪೊಲೀಸರು ಹತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಮಹಿಳೆಯ ಮೃತದೇಹದ ಭಾಗಗಳನ್ನು ಪೋಸ್ಟ್‌ ಮಾರ್ಟಂ‌ಗಾಗಿ ರವಾನಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ