ಘೋರ: ಸಹೋದರಿಯ ಕಣ್ಣುಗುಡ್ಡೆ ಕಿತ್ತು, ಪಾದ ಕತ್ತರಿಸಿದ ಸಹೋದರರು

ಗುರುವಾರ, 3 ನವೆಂಬರ್ 2016 (14:49 IST)
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಘೋರಾತಿಘೋರ ಕೃತ್ಯವೊಂದು ನಡೆದಿದೆ. ಸಹೋದರರೆಲ್ಲ ಸೇರಿ ತಮ್ಮ ಸ್ವಂತ ಸಹೋದರಿಯ ಕಣ್ಣುಗುಡ್ಡೆ ಕಿತ್ತು ಪಾದವನ್ನು ಕತ್ತರಿಸಿ ಹಾಕಿದ್ದಾರೆ.
ಲಾಹೋರ್‌ದಿಂದ 400 ಕೀಲೋಮೀಟರ್ ದೂರದಲ್ಲಿರುವ ಮುಝಫ್ಪರ್ ನಗರದಲ್ಲಿ ಬುಧವಾರ ಈ ಹೇಯ ಕೃತ್ಯ ನಡೆದಿದ್ದು ತಮ್ಮ ಸಹೋದರಿಯನ್ನು ಅಪಹರಿಸಿದ ಇಬ್ಬರು ಸಹೋದರರು ಹರಿತವಾದ ಚಾಕುವಿನಿಂದ ಈ ಪೈಶಾಚಿಕತೆಯನ್ನು ಮೆರೆದಿದ್ದಾರೆ.
 
ತಮ್ಮ ಮಗಳನ್ನು ಆಕೆ ಅಪಹರಿಸಿದ್ದಾಳೆ ಎಂಬ ಶಂಕೆಯಲ್ಲಿ ಈ ಕೃತ್ಯವನ್ನೆಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ತನ್ನ ಸಹೋದರಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನಿತ್ತಿದ್ದ. ಆದರೆ ಬಾಲಕಿ ಪತ್ತೆಯಾಗಿರಲಿಲ್ಲ. ಹೀಗಾಗಿ ತನ್ನ ಸಹೋದರಿಯ ಮೇಲೆ ಸೇಡನ್ನು ತೀರಿಸಿಕೊಳ್ಳಲು ಈ ದುಷ್ಕೃತ್ಯವನ್ನೆಸಗಿದ್ದಾರೆ. ಅವರು ನನ್ನ ತಾಯಿಯನ್ನು ಕೊಲ್ಲ ಬಯಸಿದ್ದರು ಎಂದು ಪೀಡಿತ ಮಹಿಳೆಯ ಪುತ್ರಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾಳೆ. 
 
ಮಹಿಳೆಯನ್ನೀಗ ಮುಲ್ತಾನ್‌ನಲ್ಲಿರುವ ನಿಶ್ತಾರ್ ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ