ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿ ಮಹಿಳೆಯ ಹುಚ್ಚಾಟ, Video

Sampriya

ಗುರುವಾರ, 26 ಜೂನ್ 2025 (16:25 IST)
Photo Credit X
ಹೈದರಾಬಾದ್: ಮಹಿಳೆಯೊಬ್ಬರು ರೈಲ್ವೆ ಹಳಿಗಳ ಮೇಲೆ ಕಾರನ್ನು ಓಡಿಸಿ ಹುಚ್ಚಾಟ ಮೆರೆದು, ಪ್ರಯಾಣಿಕರಲ್ಲಿ ಭೀತಿಯನ್ನು ಉಂಟುಮಾಡಿದೆ. 

ರೈಲ್ವೇ ಸಿಬ್ಬಂದಿ ಆಕೆಯನ್ನು ತಡೆಯಲು ಪದೇ ಪದೇ ಪ್ರಯತ್ನಿಸಿದರೂ, ಮಹಿಳೆ ತನ್ನ ವಾಹನವನ್ನು ಹಳಿಗಳ ಬಳಿಯಿರುವ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸುವವರೆಗೂ ವಾಹನ ಚಲಾಯಿಸುತ್ತಲೇ ಇದ್ದಳು.

ಘಟನೆಯ ನಂತರ, ಮುನ್ನೆಚ್ಚರಿಕೆಯಾಗಿ ಮಾರ್ಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಳಿಗಳ ಉದ್ದಕ್ಕೂ ಅಪಾಯಕಾರಿ ಸವಾರಿಯ ಸಮಯದಲ್ಲಿ ಕಾರಿನ ಗಾಜುಗಳು ಒಡೆದುಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಈ ವೇಳೆ ಮಹಿಳೆ ಮದ್ಯದ ಅಮಲಿನಲ್ಲಿದ್ದಳು ಎನ್ನಲಾಗಿದೆ. ಆಕೆಯ ಗುರುತನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಕೊಡಂಗಲ್ ಎಂಬ ಸ್ಥಳದಲ್ಲಿ ರೈಲ್ವೇ ಗೇಟ್ ನಿರ್ವಾಹಕರು ಕಾರನ್ನು ಮೊದಲು ಗುರುತಿಸಿದರು, ಅವರು ಹಳಿಗಳ ಬಳಿಗೆ ಬಿಳಿ ವಾಹನ ಬರುತ್ತಿರುವುದನ್ನು ಗಮನಿಸಿದರು. ಅವರು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಚಾಲಕಿ ನಿಲ್ಲಿಸದೆ ಮುಂದೆ ಸಾಗಿದ್ದಾಳೆ. 

ನಿರ್ವಾಹಕರು ವಾಹನವನ್ನು ಸ್ವಲ್ಪ ದೂರ ಹಿಂಬಾಲಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಂತಿಮವಾಗಿ, ಮಹಿಳೆ ಹಳಿಯಿಂದ ಕಾರನ್ನು ಚಲಾಯಿಸಲು ಪ್ರಯತ್ನಿಸುತ್ತಿದ್ದಾಗ, ಅದು ಹತ್ತಿರದ ಮರಗಳಿಗೆ ಡಿಕ್ಕಿ ಹೊಡೆದು ನಿಂತಿತು. ನಂತರ ಆಕೆಯನ್ನು ಬಂಧಿಸಿ ರೈಲ್ವೇ ರಕ್ಷಣಾ ಪಡೆಗೆ (ಆರ್‌ಪಿಎಫ್) ಒಪ್ಪಿಸಲಾಯಿತು

Stop oppressing women's freedom.

Let them drive wherever they want

The woman drives a car on Railway Track near Shankarpally. pic.twitter.com/zIV3grpd4G

— Squint Neon (@TheSquind) June 26, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ