ಗಂಡನ ಮನೆ ಬಿಟ್ಟು ಬಂದಿದ್ದಕ್ಕೆ ಮಹಿಳೆಯನ್ನು ಥಳಿಸಿದ ತವರಿನವರು

ಭಾನುವಾರ, 4 ಜುಲೈ 2021 (10:40 IST)
ಮಧ್ಯಪ್ರದೇಶ: ಗಂಡನ ಮನೆ ಬಿಟ್ಟು ಬಂದ ಮಹಿಳೆಯನ್ನು ಆಕೆಯ ತಂದೆ ಹಾಗೂ ಸಹೋದರರು ಸೇರಿಕೊಂಡು ಸಾರ್ವಜನಿಕವಾಗಿ ಥಳಿಸಿದ ವಿಡಿಯೋ ಒಂದು ವೈರಲ್ ಆಗಿದೆ.


ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಮಹಿಳೆಯರ ತಂದೆ ಮತ್ತು ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯನ್ನು ಪಕ್ಕದ ಗ್ರಾಮದ ವ್ಯಕ್ತಿಗೇ ಮದುವೆ ಮಾಡಿಕೊಡಲಾಗಿತ್ತು. ಆದರೆ ಪತಿ ಪತ್ನಿಯನ್ನು ಬಿಟ್ಟು ಕೆಲಸಕ್ಕೆಂದು ಗುಜರಾತ್ ಗೆ ತೆರಳಿದ್ದ. ಇದರಿಂದ ಬೇಸರಗೊಂಡ ಮಹಿಳೆ ಗಂಡನ ಮನೆ ಬಿಟ್ಟು ಬಂದಿದ್ದಳು. ಆದರೆ ಗಂಡನ ಮನೆ ಬಿಟ್ಟು ಬಂದಿದ್ದಕ್ಕೆ ತವರಿನವರು ಈ ರೀತಿಯ ಶಿಕ್ಷೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ