ಮಗಳ ಅಶ್ಲೀಲ ಫೋಟೋ ಕಿತ್ತುಹಾಕಲು ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಬುಧವಾರ, 24 ಮಾರ್ಚ್ 2021 (10:16 IST)
ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿರುವ ಮಗಳ ನಗ್ನ ಛಾಯಾಚಿತ್ರಗಳನ್ನು ಕಿತ್ತು ಹಾಕುವಂತೆ ಮಹಿಳೆಯೊಬ್ಬರು ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದಾರೆ.


ಆಸ್ಟ್ರೇಲಿಯಾ ಸಂಜಾತೆಯಾಗಿರುವ ಮಗಳ ಬಾಯ್ ಫ್ರೆಂಡ್ ಆಕೆಯ ಜೊತೆಗೆ ಸಂಬಂಧ ಕಡಿದುಕೊಂಡ ನಂತರ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಇದನ್ನು ಗಮನಿಸಿದ ಮಹಿಳೆ ಹಾಗೂ ಅಕೆಯ ಪತಿ ಈ ಫೋಟೋಗಳನ್ನು ತೆಗೆದುಹಾಕುವಂತೆ ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಪತ್ರ ಬರೆದಿದ್ದಳು.

ಇದೀಗ ಹೈಕೋರ್ಟ್ ಮೆಟ್ಟಿಲೇರಿರುವ ಮಹಿಳೆ ಈ ಸಂಬಂಧ ಪೊಲೀಸರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾಳೆ. ಮಗಳ ಹೆಸರಿನಲ್ಲಿ ಆಕೆಯ ಮಾಜಿ ಗೆಳೆಯ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋಗಳನ್ನು ಪ್ರಕಟಿಸಿದ್ದಾನೆ. ಇದರಿಂದ ಆಕೆ  ಮಾನಸಿಕವಾಗಿ ನೊಂದಿದ್ದಾಳೆ ಎಂದು ಮಹಿಳೆ ದೂರಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ