ಮೋದಿ ಪೋಸ್ಟರ್‌ಗಳಿಗೆ ಮಸಿ ಬಳೆದ ಕಾಂಗ್ರೆಸ್ ಕಾರ್ಯಕರ್ತರು

ಬುಧವಾರ, 19 ಅಕ್ಟೋಬರ್ 2016 (14:56 IST)
ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ದರ ಏರಿಕೆಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಮೋದಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮೋದಿ ಪೋಸ್ಟರ್‌ಗಳಿಗೆ ಕಪ್ಪು ಮಸಿ ಬಳೆದಿದ್ದಾರೆ.
 
ಕಾಂಗ್ರೆಸ್ ಘಟಕದ ಮಹಿಳಾ ಅಧ್ಯಕ್ಷೆ ಪೂಜಾ ಚಡ್ಡಾ ಸೇರಿದಂತೆ ಸಾವಿರಾರು ಮಹಿಳಾ ಕಾರ್ಯಕರ್ತರು ಮೋದಿ ಪೋಸ್ಟರ್‌ಗಳಿಗೆ ಕಪ್ಪು ಮಸಿ ಬಳೆದು ಪ್ರತಿಭಟನೆ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪ್ರಧಾನಿ ಮೋದಿ ಪೋಸ್ಟರ್‌ಗಳು ಜನತೆಯ ದಾರಿ ತಪ್ಪಿಸುತ್ತಿರುವುದರಿಂದ ಪೋಸ್ಟರ್‌ಗಳಿಗೆ ಕಪ್ಪು ಮಸಿ ಬಳೆಯಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಗತ್ಯ ವಸ್ತುಗಳು ದರ ಇಳಿಕೆ ಮಾಡುವ ಭರವಸೆ ನೀಡಿ ಮೋದಿ ಸರಕಾರ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ದೇಶದ ಜನತೆ ಪೆಟ್ರೋಲ್, ಡೀಸೆಲ್, ದ್ವಿದಳ ಧಾನ್ಯ, ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿವೆ. ಮುಂಬರುವ ದಿನಗಳಲ್ಲಿ ಆಯಾ ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಲ್ಲಿ ಮೋದಿ ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪೂಜಾ ಚಡ್ಡಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ