ಗ್ಯಾರಂಟಿಯಿಂದ ದಾರಿ ತಪ್ಪುತ್ತಿರುವ ಮಹಿಳೆಯರು: ಎಚ್‌ಡಿಕೆ ಹೇಳಿಕೆಗೆ 'ಕೈ' ನಾಯಕರ ಆಕ್ರೋಶ

Sampriya

ಭಾನುವಾರ, 14 ಏಪ್ರಿಲ್ 2024 (17:36 IST)
Photo Courtesy X
ಬೆಂಗಳೂರು:  ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ಗೆ ಹೊಸ ಅಸ್ತ್ರವನ್ನಾಗಿ ಪ್ರಯೋಗಿಸಿ, ಅಕ್ರೋಶ ಹೊರಹಾಕುತ್ತಿದ್ದಾರೆ.

ಜೆಡಿಎಸ್‌ ಬಿಜೆಪಿ ಮೈತ್ರಿ ಮಂಡ್ಯ ಅಭ್ಯರ್ಥಿ ಎಚ್‌ಡಿ  ಕುಮಾರಸ್ವಾಮಿ ಅವರು ಪ್ರಚಾರದ ವೇಳೆ ಕಾಂಗ್ರೆಸ್‌ನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ.  ಗ್ಯಾರಂಟಿ ಯೋಜನೆಯಿಂದ  ಹಳ್ಳಿ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದ ಎಚ್‌ಡಿಕೆ ಹೇಳಿಕೆಯನ್ನು ರಾಜಕೀಯ ದಾಳವನ್ನಾಗಿ ಕಾಂಗ್ರೆಸ್ ಪ್ರಯೋಗಿಸುತ್ತಿದೆ.

ಸಚಿವೆ ಲಕ್ಷ್ಮಿ ನಿಂಬಾಳ್ಕರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.   

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹೆಚ್.ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯದಲ್ಲಿ ಮಹಿಳೆಯರ ಪ್ರತಿಭಟನೆ, ರಸ್ತೆ ತಡೆದು ಗೋ ಬ್ಯಾಕ್ ಚಳುವಳಿ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ನಮ್ಮ ಗ್ಯಾರಂಟಿ ಯೋಜನೆಯ ಇದೀಗ ಮೋದಿ ಗ್ಯಾರಂಟಿ ಶುರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಜಾರಿ ಮಾಡಿದ ಗ್ಯಾರಂಟಿ ಮೂಲಕ ಇಂದು ಮಹಿಳೆಯರು ಬಲಢ್ಯರಾಗಿದ್ದು, ಈ ಹಿಂದೆಯೂ ನನ್ನ ತಾಯಿ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಅವರು ಕೇವಲವಾಗಿ ಮಾತನಾಡಿದ್ದರು. ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ