ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ ಅಧಿಕಾರ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಸಂಕಲ್ಪದಲ್ಲಿರುವ ಆಡಳಿತರೂಢ ಬಿಜೆಪಿ ಸರ್ಕಾರ ಇಂದು ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿತು.
ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಎಲ್ಲರಿಗೂ ಉಪಯೋಗವಾಗುವಂತಹ ಪ್ರಣಾಳಿಕೆಯನ್ನು ಬಿಡುಗಡೆಮಾಡಲಾಗಿದೆ. ಜನರಿಗೆ ಹೊಸ ಬದುಕು ಕಟ್ಟಿಕೊಳ್ಳುವ ಭರವಸೆಯನ್ನು ಈ ಮೂಲಕ ನೀಡುತ್ತೇನೆ ಎಂದರು.
ಅದಲ್ಲದೆ ದೇಶದಲ್ಲಿ 20ಕ್ಕೂ ಹೆಚ್ಚು ನಗರಗಳಲ್ಲಿ ಮೆಟ್ರೋ ಪರಿಚಯ, 6ಜಿ ನೆಟ್‌ವರ್ಕ. ಯುವಶಕ್ತಿ, ನಾರಿಶಕ್ತಿ, ರೈತ ಶಕ್ತಿ ಮೂಲಕ ಹೊಸ ಭರವಸೆಗಳನ್ನು ನೀಡಿದರು. ಮುಂದಿನ 5 ವರ್ಷಕ್ಕೆ ಉಚಿತ ಪಡಿತರ, ಉದ್ಯೋಗ ಸೃಷ್ಟಿ, ವಂದೇ ಭಾರತ್‌ನಡಿಯಲ್ಲಿ ರೈಲು ಮತ್ತಷ್ಟು ವಿಸ್ತರಣೆ. ದಕ್ಷಿಣ, ಉತ್ತರ ಭಾರತ ಹಾಗೂ ಪೂರ್ವದಲ್ಲಿ ಬುಲೆಟ್ ಟ್ರೈನ್ ಆರಂಭ, ವಂದೇ ಭಾರತ್ ಮಾದರಿಯ ಮೆಟ್ರೋ ರೈಲುಗಳ ಪ್ರಾರಂಭ. ಮನೆ ಮನೆಗೆ ಗ್ಯಾಸ್ ಕನೆಕ್ಷನ್. ಮುದ್ರಾ ಯೋಜನೆ ನೀಡುತ್ತಿದ್ದ ಸಾಲದ ಮಿತಿ ಹೆಚ್ಚಳ ಮಾಡಲಾಗುವುದು ಎಂದರು.