ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ : ತಾಲಿಬಾನ್
ಶನಿವಾರ, 24 ಡಿಸೆಂಬರ್ 2022 (12:16 IST)
ಕಾಬೂಲ್ : ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ವಿಶ್ವವಿದ್ಯಾಲಯ ಶಿಕ್ಷಣವನ್ನು ನಿಷೇಧಿಸಿದ್ದು, ಜಾಗತಿಕವಾಗಿ ಟೀಕೆಗಳಿಗೆ ಗುರಿಯಾಗಿದೆ.
ಇದೀಗ ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಮಹಿಳೆಯರನ್ನು ಶಿಕ್ಷಣದಿಂದ ದೂರವಿಡುವ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.
ಮಹಿಳೆಯರ ಶಿಕ್ಷಣವನ್ನು ನಿಷೇಧಿಸುವ ವಿಚಾರದ ಬಗ್ಗೆ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿರುವ ತಾಲಿಬಾನ್ ಸಚಿವ ಮೊದಮ್ಮದ್ ನದೀಮ್, ವಿಶ್ವವಿದ್ಯಾಲಯಗಳಲ್ಲಿ ಹುಡುಗರು ಹಾಗೂ ಹುಡುಗಿಯರು ಜೊತೆಯಾಗಿ ಓದುವುದನ್ನು ತಪ್ಪಿಸುವ ಸಲುವಾಗಿ ಮಹಿಳೆಯರಿಗೆ ವಿಶ್ವವಿದ್ಯಾಲಯಗಳ ಶಿಕ್ಷಣವನ್ನು ನಿಷೇಧಿಸಲಾಗಿದೆ.
ವಿಶ್ವವಿದ್ಯಾಲಯಗಳ ಕೆಲವು ವಿಚಾರಗಳು ಇಸ್ಲಾಂನ ತತ್ವಗಳನ್ನು ಉಲ್ಲಂಘಿಸುತ್ತವೆ. ಮುಂದಿನ ಸೂಚನೆ ಬರುವವರೆಗೂ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.