ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ನಮ್ಮನ್ನು ಎಳೆದಡಿದಾಗ ನಮ್ಮ ನೋವು ಮತ್ತು ಕಣ್ಣೀರನ್ನು ಕಾಂಗ್ರೆಸ್ ಅರ್ಥಮಾಡಿಕೊಂಡು, ನಮಗೆ ಬೆಂಬಲ ಸೂಚಿಸಿತ್ತು. ಮಹಿಳೆಯರಿಗೆ ಬೆಂಬಲವಾಗಿರುವ ಪಕ್ಷಕ್ಕೆ ನಾನು ಸೇರಿಕೊಂಡಿದ್ದೇನೆ.
ಈ ಸಂದರ್ಭದಲ್ಲಿ ವಿಶೇಷವಾಗಿ ದೇಶದ ಮಹಿಳೆಯರಿಗಾಗಿ ಹೋರಾಟವನ್ನು ಮುಂದುವರೆಸುವುದಾಗಿ ಫೋಗಟ್ ಪ್ರತಿಜ್ಞೆ ಮಾಡಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್, ಪಕ್ಷದ ನಾಯಕ ಪವನ್ ಖೇರಾ, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಮತ್ತು ಹರಿಯಾಣದ ಎಐಸಿಸಿ ಉಸ್ತುವಾರಿ ದೀಪಕ್ ಬಬಾರಿಯಾ ಅವರ ಸಮ್ಮುಖದಲ್ಲಿ ಫೋಗಟ್ ಮತ್ತು ಬಜರಾಗ್ ಪುನಿಯಾ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮೊದಲು ನಾನು ಈ ದೇಶದ ಜನರಿಗೆ ಮತ್ತು ಮಾಧ್ಯಮದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ನಮ್ಮ ಕುಸ್ತಿ ಪಯಣದುದ್ದಕ್ಕೂ ನೀವೆಲ್ಲರೂ ನಮ್ಮೊಂದಿಗೆ ಇದ್ದೀರಿ, ನಾನು ಕಾಂಗ್ರೆಸ್ ಪಕ್ಷಕ್ಕೂ ಧನ್ಯವಾದ ಹೇಳುತ್ತೇನೆ. ನಮ್ಮನ್ನು ರಸ್ತೆಯಲ್ಲಿ ಎಳೆದಡಿದಾಗ ಬಿಜೆಪಿಯನ್ನು ಹೊರತುಪಡಿಸಿ ದೇಶದ ಎಲ್ಲಾ ಪಕ್ಷಗಳು ನಮ್ಮೊಂದಿಗೆ ಇದ್ದವು, ಅವರು ನಮ್ಮ ನೋವನ್ನು ಅನುಭವಿಸಿದರು, ನಾನು ನಿಂತಿರುವ ಪಕ್ಷಕ್ಕೆ ಸೇರಿದೆ ಮಹಿಳೆಯರೊಂದಿಗೆ ಮತ್ತು 'ಸಡಕ್‌ನಿಂದ ಸಂಸದ್ ತಕ್' ವರೆಗೆ ಹೋರಾಡಲು ಸಿದ್ಧ ಎಂದು ಹೇಳಿದರು.