ವಂದೇ ಭಾರತ್‌ನಲ್ಲಿ ವಿಶೇಷ ವಿನ್ಯಾಸದ ಸ್ಲೀಪರ್‌ ಕೋಚ್‌: ಸಚಿವ ಅಶ್ವಿನಿ ವೈಷ್ಣವ್‌ ಅನಾವರಣ

Sampriya

ಭಾನುವಾರ, 1 ಸೆಪ್ಟಂಬರ್ 2024 (12:33 IST)
Photo Courtesy X
ಬೆಂಗಳೂರು: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ವಂದೇ ಭಾರತ್‌ ರೈಲುಗಳ ಸ್ಲೀಪರ್‌ ಕೋಚ್‌ ಮಾದರಿಯನ್ನು ಅವರು ಇಂದು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅಶ್ವಿನಿ ವೈಷ್ಣವ್‌, ರೈಲುಗಳನ್ನು ಹಳಿಗೆ ಇಳಿಸುವ ಮೊದಲು 10 ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಿವೆ. ಮುಂದಿನ ಮೂರು ತಿಂಗಳಲ್ಲಿ ರೈಲು ಪ್ರಯಾಣಿಕರ ಓಡಾಟಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ವಂದೇ ಭಾರತ್‌ ರೈಲಿನ ಟಿಕೆಟ್‌ಗಳು ಕೈಗೆಟಕುವ ದರದಲ್ಲಿದ್ದು, ಮಧ್ಯಮ ವರ್ಗದ ಜನರೂ ಕೂಡ ಪ್ರಯಾಣ ಮಾಡಬಹುದಾಗಿದೆ  ಈ ರೈಲಿನಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳಿವೆ. ಈ ರೈಲನ್ನು ವಿಶ್ವದ ಅತ್ಯುತ್ತಮ ರೈಲುಗಳೊಂದಿಗೆ ಹೋಲಿಸಬಹುದು ಎಂದು ವಿವರಿಸಿದರು.

ಪ್ರತಿ ವಿಷಯಗಳಿಗೂ ಹೆಚ್ಚಿನ ಒತ್ತು ನೀಡಿ ಎಚ್ಚರಿಕೆಯಿಂದ ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಲೊಕೊ ಪೈಲಟ್‌ಗಳು, ನಿರ್ವಹಣಾ ಸಿಬ್ಬಂದಿ ಅಥವಾ ಹಾಸಿಗೆ ಮತ್ತು ಆಹಾರವನ್ನು ಪೂರೈಸುವ ಸಿಬ್ಬಂದಿಯ ಅಗತ್ಯತೆಗಳನ್ನು ಪರಿಗಣಿಸಲಾಗಿದೆ. ಪ್ರತಿ ಶೌಚಾಲಯವನ್ನು ವಿಶೇಷ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪರೀಕ್ಷೆಯು ಮುಂದಿನ ಒಂದರಿಂದ ಎರಡು ತಿಂಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ