ಕಾಂಗ್ರೆಸ್ ಸೇರಿದ ಜಗನ್ ಸಹೋದರಿ, ರಾಹುಲ್ ಪ್ರಧಾನಿ ಆಗುವುದು ತಂದೆಯ ಕನಸು ಎಂದ ಶರ್ಮಿಳಾ

Krishnaveni K

ಗುರುವಾರ, 4 ಜನವರಿ 2024 (12:36 IST)
ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಸಹೋದರಿ, ವೈಎಸ್ ಆರ್ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಶರ್ಮಿಳಾ ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಆಂಧ್ರದ ದಿವಂಗತ ಮುಖ್ಯಮಂತ್ರಿ ವೈ ರಾಜಶೇಖರ ರೆಡ್ಡಿಯವರ ಪುತ್ರಿಯಾಗಿರುವ ಶರ್ಮಿಳಾ ಬಳಿಕ ಸಹೋದರ ಜಗನ್ ರೆಡ್ಡಿ ಜೊತೆಗೂಡಿ ವೈಎಸ್ ಆರ್ ಪಕ್ಷ ಕಟ್ಟಿದ್ದರು. ಇದೀಗ ತಂದೆ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಕ್ಷ ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದಿದ್ದಾರೆ.

ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ತಂದೆ ರಾಜಶೇಖರ ರೆಡ್ಡಿಯವರ ಕನಸಾಗಿತ್ತು. ಅದನ್ನು ಸಾಧ‍್ಯವಾಗಿಸುವುದರ ನಿಟ್ಟಿನಲ್ಲಿ ನಾನೂ ಕೈಜೋಡಿಸಲಿದ್ದೇನೆ ಎಂಬುದು ನನಗೆ ಖುಷಿ ಕೊಡುತ್ತಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ