ಪರಿಸರ ರಕ್ಷಣೆ, ಮಳೆ ಬರಿಸಲು ಯಜ್ಞ ಸಹಾಯಕಾರಿ: ಬಿಜೆಪಿ ಸಂಸದ

ಶನಿವಾರ, 6 ಆಗಸ್ಟ್ 2016 (17:08 IST)
ಪರಿಸರ ರಕ್ಷಣೆಗೆ ಮತ್ತು ಮಳೆ ಬರಿಸಲು ಯಜ್ಞ ಸಹಾಯಕ ಎಂದು ಬಿಜೆಪಿ ಶಾಸಕ ವಿರೇಂದ್ರ ಸಿಂಗ್ ಹೇಳಿದ್ದಾರೆ.

ಸುಸ್ಥಿರ ಅಭಿವೃದ್ಧಿ ಧ್ಯೇಯಗಳ (SDG) ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅವರು, ಯಜ್ಞ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ. ಬರಗಾಲದ ಸಮಯದಲ್ಲಿ ಯಜ್ಞವನ್ನು ಮಾಡಿಸುವಂತೆ ಮನವಿ ಮಾಡಿಕೊಂಡರು.

ಯಜ್ಞವನ್ನು ಮಾಡುವಂತೆ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಇದು ಮಳೆ ಬರಿಸಲು ಮತ್ತು ಪರಿಸರ ರಕ್ಷಣೆಗೆ ಸಹಾಯಕ. ತುಪ್ಪದ ಉತ್ಪನ್ನಗಳನ್ನು ಅಗ್ನಿಗರ್ಪಿಸುವುದರಿಂದ 300% ಆಮ್ಲಜನಕ ಉತ್ಪನ್ನವಾಗುವುದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಯಜ್ಞದಲ್ಲಿ ಕೇವಲ ಕೃಷಿ ಉತ್ಪನ್ನಗಳನ್ನು ಸಮರ್ಪಿಸಲಾಗುತ್ತದೆ. ಇದು ಮಳೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಭಿವೃದ್ಧಿ ಸುಸ್ಥಿರವಾಗಿರಬೇಕು, ಪ್ರಕೃತಿ ಮೇಲೆ ಶೋಷಣೆ ನಡೆಸಿ ಮಾಡುವಂತಾಗಬಾರದು ಎಂದ ಅವರು ಅಭಿವೃದ್ಧಿ ಭಾರತ-ಕೇಂದ್ರಿತವಾಗಿರಬೇಕು . 6.5 ಲಕ್ಷ ಹಳ್ಳಿಗಳೆಡೆ ಗಮನ ನೀಡಬೇಕು.ಪಶ್ಚಿಮ ರಾಷ್ಟ್ರಗಳು ಅನುಸರಿಸುವಂತೆ  ಅಭಿವೃದ್ಧಿ ಬಗ್ಗೆ ನಮ್ಮದೇ ಆದ ವ್ಯಾಖ್ಯಾನವನ್ನು ರೂಪಿಸಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ