ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಗಳ ಸುದ್ದಿಯಲ್ಲಿರುತ್ತಿದ್ದ ಗೋರಖ್ ಪುರದ ಸಂಸದ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಸಿಎಂ ಆಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ನಡೆದ ಉತ್ತರಪ್ರದೇಶದ ಬಿಜೆಪಿ ಶಾಸಕಾಂಗ ಸಭೆ ಆದಿತ್ಯಾನಾಥ್ ಅವರನ್ನ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ.
1972ರಲ್ಲಿ ಉತ್ತರಾಖಂಡ್`ನ ಗರ್ಹ್ವಾಲ್`ನಲ್ಲಿ ಕ್ಷತ್ರೀಯ ಕುಟುಂಬದಲ್ಲಿ ಜನಿಸಿದ 44 ವರ್ಷದ ಆದಿತ್ಯಾನಾಥ್, 1994ರವರೆಗೆ ಗೋರಖ್ ನಾಥ್ ದೇಗುಲದ ಅರ್ಚಕರಾಗಿದ್ದರು. 26ನೇ ವಯಸ್ಸಿಗೆ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಿ ಅಂದಿನಿಂದ 6 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
2004ರಲ್ಲಿ ಲೋಕಸಭೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸಿದ್ದರು. ಕಟ್ಟಾ ಹಿಂದೂವಾದಿಯಾಗಿರುವ ಆದಿತ್ಯಾನಾಥ್ ಹಲವು ವಿವಾದಿತ ಹೇಳಿಕೆಗಲ ಮೂಲಕ ಸುದ್ದಿಯಾಗಿದ್ದರು.