"ನಿಮ್ಮನ್ನು ಹತ್ತಿರದ ಆರ್‌ಎಸ್ಎಸ್‌ನ ಶಾಖೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಎಲ್ಲರಿಗೂ ನಾನು ವಿನಂತಿಸುತ್ತೇನೆ. ಆರ್‌ಎಸ್ಎಸ್‌ನಲ್ಲಿ ಸೇರ್ಪಡೆಗೊಳ್ಳದ ಯಾವ ಹಿಂದೂ ನಿಜವಾದ ಹಿಂದೂವೇ ಅಲ್ಲ ಮತ್ತು ಅವನು ನಮ್ಮ ರಾಷ್ಟ್ರದ ಸೇವೆಯನ್ನು ಸಲ್ಲಿಸುವಲ್ಲಿ ಅಸಮರ್ಥನಾಗಿರುತ್ತಾನೆ" ಎಂದು ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ತಮ್ಮ ರಾಲಿಯಲ್ಲಿ ನೆರೆದಿದ್ದ ಬೃಹತ್ ಜನರ ಸಮೂಹಕ್ಕೆ ರಾಜಾ ಸಿಂಗ್ ಅವರು ಹೇಳಿದ್ದಾರೆ.
ಮುಂದುವರಿದಂತೆ ಬಿಜೆಪಿಯ ಈ ಶಾಸಕರು, ಭಾರತದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ, ಅವರು ಯಾವುದೇ ಧರ್ಮದವರಾಗಿದ್ದರೂ ಸಹ 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಹೇಳಲೇಬೇಕು ಇಲ್ಲವಾದಲ್ಲಿ ಅವರಿಗೆ "ಈ ದೇಶವನ್ನು ತೊರೆಯಲು ಮುಕ್ತ ಅವಕಾಶವಿದೆ" ಎಂದರು. ವಿಶ್ವದ ಯಾವುದೇ ದೇಶವು ಶತ್ರು ದೇಶದ ಜನರನ್ನು ಹೊಂದುವುದು ಅಥವಾ ಭಯೋತ್ಪಾದಕರನ್ನು ಹೊಂದುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.
"ಬೇರೆ ಯಾವುದೇ ದೇಶವು 'ಭಾರತ್ ಮಾತಾ ಕೀ ಜೈ' ಎಂದು ಹೇಳುವ ಯಾರನ್ನೂ ಸಹಿಸುವುದಿಲ್ಲ ಆದರೆ ನಮ್ಮ ದೇಶದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಹೇಳುವ ಮತ್ತು ಅಫ್ಝಲ್ ಗುರುವಿನಂತಹ ಭಯೋತ್ಪಾದಕ ಜನರನ್ನು ಹೊಂದಿದ್ದೇವೆ ಎಂದರು. ಕಾಶ್ಮೀರಿ ಪ್ರತ್ಯೇಕತಾವಾದಿಯಾಗಿದ್ದ ಗುರು, 2001 ರ ಭಾರತೀಯ ಸಂಸತ್ತಿನ ದಾಳಿಯಲ್ಲಿ ಅಪರಾಧಿಯಾಗಿದ್ದ ಅವನನ್ನು 2013 ರಲ್ಲಿ ಗಲ್ಲಿಗೇರಿಸಲಾಯಿತು.