ಸೆಕ್ಸ್ಗೆ ಒಪ್ಪಿಲ್ಲವೆಂದು ಅಶ್ಲೀಲ ಸೈಟ್ಗೆ ಯವತಿಯ ಫೋನ್ ನಂಬರ್ ಅಪ್ಲೋಡ್ ಮಾಡಿದ ಯುವಕ
ಶುಕ್ರವಾರ, 10 ಸೆಪ್ಟಂಬರ್ 2021 (13:48 IST)
ಯುವಕನೊಬ್ಬ ಲೈಂಗಿಕ ಬೇಡಿಕೆ ಈಡೇರಿಸಲು ತಿರಸ್ಕರಿಸಿದ ಯುವತಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತ ಯುವತಿಯ ಕಾಲೇಜಿನ ಮಾಹಿತಿ ಮತ್ತು ಆಕೆಯ ಮೊಬೈಲ್ ನಂಬರ್ ಅನ್ನು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ಕಾರಣ ಮಹಾರಾಷ್ಟ್ರದ ಮಲಾಡ್ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು 26 ವರ್ಷದ ಕುನಾಲ್ ಅಂಗೋಲ್ಕರ್ ಎಂದು ಗುರುತಿಸಲಾಗಿದೆ.
ಅಲ್ಲದೇ ಲೈಂಗಿಕ ಚಟುವಟಿಕೆ ಸಂಬಂಧಿಸಿದ ಆಟಿಕೆಗಳನ್ನು ಸಹ ಕೊರಿಯರ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಈ ವಿದ್ಯಾರ್ಥಿನಿಗೆ ಸೆಕ್ಸ್ ವಿಚಾರದಲ್ಲಿ ಅಪರಿಚಿತರಿಂದ ಸಾಕಷ್ಟು ಕರೆಗಳು ಬರಲಾರಂಭಿಸಿದವು. ಇದು ಮಿತಿ ಮೀರಿದಾಗ ಈಕೆ ಪೊಲೀಸರಿಗೆ ಈ ಸಂಬಂಧ ದೂರು ನೀಡಿದಳು. ಜೊತೆಗೆ ಇದೇ ವೇಳೆ ಹಲವು ಬಾರಿ ಸೆಕ್ಸ್ ಆಟಿಕೆಗಳು ಕೂಡ ಬಂದವು. ಆಗ ಈಕೆ ಇದು ತಪ್ಪಾಗಿ ನನ್ನ ಬಳಿ ತಲುಪಿರಬಹುದೆಂದು ಅದನ್ನು ವಾಪಸ್ ಕಳುಹಿಸಿಕೊಟ್ಟಿದ್ದಾಳೆ. ಆದರೂ ನಿರಂತರವಾಗಿ ಬರುತ್ತಿದ್ದ ಪಾರ್ಸೆಲ್ಗಳನ್ನು ನೋಡಿ ಬೇಸತ್ತಿದ್ದ ಆಕೆ ಪಾರ್ಸೆಲ್ ತೆರೆದು ನೋಡಿದ್ದಾಳೆ. ಆದರೆ ಆ ಪಾರ್ಸೆಲ್ನಲ್ಲಿ ಸೆಕ್ಸ್ ಆಟಿಕೆಗಳೇ ಬರುತ್ತಿದ್ದುದನ್ನು ಕಂಡ ಆಕೆ ಗಾಬರಿಗೊಂಡು ಪೊಲೀಸರ ಬಳಿ ದೂರು ನೀಡಿದ್ದಾಳೆ.
ಆಕೆ ದೂರಿನ ತರುವಾಯ ಪೊಲೀಸರು ತನಿಖೆ ಕೈಗೊಂಡರು. ಆಕೆಗೆ ಸೆಕ್ಸ್ ಆಟಿಕೆಗಳನ್ನು ಕಳುಹಿಸುತ್ತಿದ್ದವರು ಯಾರು ಎಂಬುದನ್ನು ಪತ್ತೆಹಚ್ಚಲು ಕೊರಿಯರ್ ಬರುತ್ತಿದ್ದ ಕಂಪೆನಿಗಳನ್ನು ಸಂಪರ್ಕಿಸಲಾಯಿತು, ನಂತರ ಪುನಃ ಐಪಿ ವಿಳಾಸ ಹುಡುಕಲಾರಂಭಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಿಡ್ಡೇ ವರದಿ ಮಾಡಿದೆ.
ವಿಪಿಎಸ್ ಸಂಪರ್ಕ ಬಳಸಿಕೊಂಡು ಆತ ಯಾವ ಸ್ಥಳದಿಂದ ಆಟಿಕೆಗಳನ್ನು ಕಳುಹಿಸುತ್ತಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದರು. ನಂತರ, ತನಿಖಾಧಿಕಾರಿಗಳು ಅಂತರ್ಜಾಲ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ, ಸೆಕ್ಸ್ ಆಟಿಕೆಗಳನ್ನು ಆರ್ಡರ್ ಮಾಡಲು ಬಳಸಿದ ಸೈಟ್ಗೆ ಭೇಟಿ ನೀಡಿದ ಬಳಕೆದಾರರ ಐಪಿ ವಿಳಾಸಗಳನ್ನು ಪಡೆದರು.
ಮೊದಲು ನಾವು 500ಕ್ಕೂ ಹೆಚ್ಚು ಐಪಿ ವಿಳಾಸಗಳನ್ನು ಪಡೆದುಕೊಂಡೆವು. ನಂತರ ನಾವು ಐಪಿ ವಿಳಾಸಗಳ ಪಟ್ಟಿ ಕೇಳಿ ಪಡೆದೆವು. ಅದರಲ್ಲಿ ಲೈಂಗಿಕ ಆಟಿಕೆಗಳನ್ನು ಕಳುಹಿಸಿಕೊಡುತ್ತಿದ್ದವರು ಯಾರು ಎಂಬುದನ್ನು ಕೂಡ ಮಾಹಿತಿ ಪಡೆದೆವು. ಈ ರೀತಿಯಾಗಿ ನಾವು ಆರೋಪಿಗಳು ಬಳಸಿದ ಒಂದು ಐಪಿ ವಿಳಾಸ ಪತ್ತೆ ಹಚ್ಚಿ ಆತನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದೆವು. ನಂತರ ಅವನಿರುವ ಸ್ಥಳ ಪತ್ತೆ ಹಚ್ಚಿ ಆತನನ್ನು ಬಂಧನಕ್ಕೆ ಒಳಪಡಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಆರೋಪಿ ಪತ್ತೆ ಹಚ್ಚಿದ ರೀತಿಯನ್ನು ವಿವರಿಸಿದರು.
ಬಂಧಿತನಾದ ಕುನಾಲ್ ಅಂಗೋಲ್ಕರ್ನನ್ನು ವಿಚರಿಸಿದಾಗ ನನ್ನ ಬೇಡಿಕೆಯನ್ನು ಆಕೆ ತಿರಸ್ಕರಿಸಿದಳು ಎಂದು ಆರೋಪಿಯು ಪೊಲೀಸರಿಗೆ ತಿಳಿಸಿದನು. ಇದಾದ ನಂತರ, ಅವನು ಅವಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿರುವುದಾಗಿ ತಿಳಿಸಿದನು ಎಂದು ಪೊಲೀಸರು ಮಾಹಿತಿ ನೀಡಿದರು.