ಮಹಿಳೆಯರಂತೆ ಡ್ರೆಸ್ ಮಾಡಿದ್ದನ್ನು ನೋಡಿ ತಮಾಷೆ ಮಾಡಿದರೆಂದು ಪ್ರಾಣಕ್ಕೇ ಕುತ್ತು ತಂದ!
ಯುವಕನ ವೇಷ ನೋಡಿ ಆಪ್ ನಲ್ಲಿರುವ ಫಾಲೋವರ್ ಗಳು, ಸ್ನೇಹಿತರು ಹೆಂಗಸು ಎಂದು ತಮಾಷೆ ಮಾಡುತ್ತಿದ್ದರು. ಇನ್ನು ಕೆಲವರು ಎಡಬಿಡಂಗಿ ಎಂದು ಕೀಟಲೆ ಮಾಡುತ್ತಿದ್ದರಿಂದ ಮನನೊಂದು ಕಲ್ಯಾಣರಸನ್ ಎಂಬಾತ ಚಲಿಸುತ್ತಿರುವ ರೈಲಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.
ಇದೀಗ ಪೊಲೀಸರು ಈತನ ಫೋನ್ ಗಾಗಿ ಹುಡುಕಾಟ ನಡೆಸಿದ್ದಾರೆ. ಇಂತಹ ವಿಡಿಯೋ ಅಪ್ ಲೋಡ್ ಮಾಡಿದ್ದಕ್ಕೆ ಆತನ ಕುಟುಂಬದವರು ಆತನ ಮೇಲೆ ಹರಿಹಾಯ್ದಿದ್ದರು. ಈ ವಿಡಿಯೋ ಅಪ್ ಲೋಡ್ ಮಾಡಿದ ಮೇಲೆ ಟೀಕೆಗಳಿಂದ ಆತ ತೀವ್ರ ಮನನೊಂದಿದ್ದ ಎಂದು ಕಲ್ಯಾಣರಸನ್ ನೆರೆಮನೆಯಾತ ಪೊಲೀಸರಿಗೆ ಹೇಳಿದ್ದಾನೆ.