ಯುವತಿಗೆ ಕಾಟ ಕೊಟ್ಟಿದ್ದಲ್ಲದೆ ತಂದೆಯ ಬೈಕ್ ಹಾಳು ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್
ಮಗಳು ಇತ್ತೀಚೆಗೆ ಮಂಕಾಗಿರುವುದನ್ನು ಗಮನಿಸಿದ ತಾಯಿ ಈ ಬಗ್ಗೆ ವಿಚಾರಿಸಿದಾಗ ಯುವಕ ಕಳೆದ ಐದು ತಿಂಗಳಿನಿಂದ ತನಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ ಎಂದು ಹೇಳಿದ್ದಾಳೆ. ಒಂದು ವೇಳೆ ಪ್ರೀತಿಸದೇ ಹೋದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಈ ಸಂಬಂಧ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.