ಇಂಗ್ಲಿಷ್ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ಮಂಗಳವಾರ, 12 ಸೆಪ್ಟಂಬರ್ 2017 (09:19 IST)
ನವದೆಹಲಿ: ಈ ಯುವಕ ತನ್ನ ಗೆಳೆಯನೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತಾಡಿದ್ದೇ ತಪ್ಪಾಯ್ತು. ಅದೇ ತಪ್ಪಿಗೆ ಆತನ ಮೇಲೆ ಐವರ ಗುಂಪೊಂದು ದಾಳಿ ಮಾಡಿದೆ.


 
ಇದು ನಡೆದಿರುವುದು ದೆಹಲಿಯ ಹೋಟೆಲ್ ಒಂದರಲ್ಲಿ. ನೊಯ್ಡಾ ಮೂಲದ ವರುಣ್ ಗುಲಾಟಿ (22) ಎಂಬಾತ ಹಲ್ಲೆಗೊಳಗಾದವ. ಈತ ಸ್ನೇಹಿತನನ್ನು ಬಿಡಲು ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಒಂದಕ್ಕೆ ಬಂದಿದ್ದಾಗ ಘಟನೆ ನಡೆದಿದೆ.

ಸ್ನೇಹಿತನ ಜತೆಗೆ ಸುಲಲಿತವಾಗಿ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ಈತನ ಮೇಲೆ ಏಕಾ ಏಕಿ ಐವರ ಗುಂಪು ದಾಳಿ ನಡೆಸಿದೆ. ಇಂಗ್ಲಿಷ್ ನಲ್ಲಿ ಮಾತನಾಡಿದ್ದು ಏಕೆಂದು ಪ್ರಶ್ನಿಸಿ ಹಲ್ಲೆ ನಡೆಸಿದೆ. ನಂತರ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಆದರೆ ಹಲ್ಲೆಗೊಳಗಾದ ವರುಣ್ ದುಷ್ಕರ್ಮಿಗಳು ಬಂದಿದ್ದ ವಾಹನ ನಂಬರ್ ನ್ನು ಗುರುತಿಸಿಕೊಂಡಿದ್ದರಿಂದ ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ಕಷ್ಟವಾಗಲಿಲ್ಲ. ಇದೀಗ ಮೂವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ.. ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಪ್ರತಿರೋಧ ಸಮಾವೇಶ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ