ಜಾಮೂನ್ ನೀಡುವ ನೆಪದಲ್ಲಿ ಹುಡುಗಿಯ ಮೇಲೆ ಮಾನಭಂಗ

ಮಂಗಳವಾರ, 25 ಮೇ 2021 (09:29 IST)
ಆಗ್ರಾ : ಇಬ್ಬರು ವ್ಯಕ್ತಿಗಳು 13 ವರ್ಷದ ಹುಡುಗಿಗೆ ಜಾಮೂನ್ ನೀಡುವ ನೆಪದಲ್ಲಿ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಆಗ್ರದಲ್ಲಿ ನಡೆದಿದೆ.

ಹುಡುಗಿಯ ಪೋಷಕರು ವಿವಾಹ ಕಾರ್ಯಕ್ರಮಕ್ಕೆ ಹೋಗಿದ್ದು, ಹುಡುಗಿ ಮನೆಯಲ್ಲಿ ಒಂಟಿಯಾಗಿರುವಾಗ ಮನೆಗೆ ಬಂದ ಆರೋಪಿಗಳು ಜಾಮೂನ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಇಂತಹ ಕೃತ್ಯ ಎಸಗಿದ್ದಾರೆ. ಮತ್ತು ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. 

ಆದರೆ ಹುಡುಗಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಫಿಗಳನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ