ವಿವಾಹಿತ ಮಹಿಳೆಯ ಕನಸಿನಲ್ಲಿ ಕಾಮನಬಿಲ್ಲು ಕಂಡುಬಂದರೆ ಎನರ್ಥ ಗೊತ್ತಾ?
ಶನಿವಾರ, 24 ಏಪ್ರಿಲ್ 2021 (06:46 IST)
ಬೆಂಗಳೂರು : ನಿದ್ರೆ ಮಾಡುವಾಗ ಕನಸು ಬೀಳುವುದು ಸಹಜ. ಆದರೆ ಕೆಲವು ಕನಸುಗಳಿಗೆ ಅರ್ಥವಿದ್ದರೆ, ಇನ್ನೂ ಕೆಲವು ಕನಸುಗಳು ಅರ್ಥವೇ ಆಗುವುದಿಲ್ಲ. ಹಾಗೇ ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಎನರ್ಥ ಎಂಬುದನ್ನು ತಿಳಿದುಕೊಳ್ಳಿ.
*ಮಳೆಬಿಲ್ಲು ಕನಸಿನಲ್ಲಿ ಕಂಡುಬಂದರೆ ಜೀವನದಲ್ಲಿಸಂತೋಷ ಮತ್ತು ಸಮೃದ್ಧಿ ಬರಲಿದೆ ಎಂದರ್ಥ.
*ಕಾಮನಬಿಲ್ಲು ಕನಸಿನಲ್ಲಿ ಕಂಡುಬಂದರೆ ಆ ವ್ಯಕ್ತಿಯ ಗೌರವ ಹೆಚ್ಚಾಗುತ್ತದೆ ಮತ್ತು ಅವನ ಘನತೆ ಉನ್ನತ ಮಟ್ಟಕ್ಕೇರುತ್ತದೆ ಎಂದರ್ಥ.
*ಕನಸಿನಲ್ಲಿ ಕಾಮನಬಿಲ್ಲು ಕಂಡರೆ ವ್ಯಕ್ತಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಏಳಿಗೆ ಪಡೆಯುತ್ತಾನೆ ಎಂದರ್ಥ.
*ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಭವಿಷ್ಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಕೇಳಲಿದ್ದೀರಿ ಎಂದರ್ಥ.
*ವಿವಾಹಿತ ಮಹಿಳೆಯ ಕನಸಿನಲ್ಲಿ ಕಾಮನಬಿಲ್ಲು ಕಂಡುಬಂದರೆ ಆಕೆ ತನ್ನ ಪತಿಯಿಂದ ದೀರ್ಘಕಾಲ ಬೇರೆಯಾಗಿ ಉಳಿಯಬೇಕಾಗಬಹುದು ಎಂದರ್ಥ.