ತ್ರಿವಳಿ ತಲಾಖ್ ವಿರೋಧಿಸಿದ್ದಕ್ಕೆ ಪತಿಯ ಸಮ್ಮುತಿಯಿಂದಲೇ 10 ಮಂದಿಯಿಂದ ಗ್ಯಾಂಗ್‌ರೇಪ್

ಮಂಗಳವಾರ, 28 ನವೆಂಬರ್ 2017 (16:15 IST)
ತ್ರಿವಳಿ ತಲಾಖ್ ವಿರೋಧಿಸಿದ್ದರಿಂದ ಕೋಪಗೊಂಡ ಪತಿ ಮಹಾಶಯನೊಬ್ಬ, ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ 10 ಮಂದಿಯಿಂದ ಅತ್ಯಾಚಾರ ಮಾಡಿಸಿದ ಹೇಯ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ.

ಈ ಘಟನೆಯು ಶಹಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ರುಕ್ಸಾರ್ (ಹೆಸರು ಬದಲಾಗಿದೆ) 21 ಏಪ್ರಿಲ್ 2014 ರಂದು ಸಾರೈ ಖ್ವಾಜಾ ನಿವಾಸಿಯಾದ ಜಾವೇದ್‌ನನ್ನು ವಿವಾಹವಾಗಿದ್ದರು.
 
ರಕ್ಸ್ಕಾರ್ ಪ್ರಕಾರ, "18 ಅಕ್ಟೋಬರ್ 2016 ರಂದು, ಕೆಲವು ಮುಸ್ಲಿಂ ಸಂಘಟನೆಗಳು ತ್ರಿವಳಿ ತಲಾಕ್ ಅನ್ನು ಬೆಂಬಲಿಸಲು ಮೆರವಣಿಗೆಯನ್ನು ಪ್ರಾರಂಭಿಸಿದ್ದವು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಪತಿ ಜಾವೇದ್, ಪತ್ನಿ ರುಕ್ಸಾರ್‌ಗೆ ಕೋರಿದ್ದಾನೆ.
 
ರ್ಯಾಲಿಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಹಣವನ್ನು ನೀಡಲಾಗಿತ್ತು. ತ್ರಿವಳಿ ತಲಾಖ್ ತಪ್ಪು.ನಾನು ಅದನ್ನು ಬೆಂಬಲಿಸುವುದಿಲ್ಲ ಎಂದು ನಾನು ಪತಿ ಜಾವೇದ್‌ಗೆ ತಿಳಿಸಿದೆ. ನನ್ನ ಪತಿ ಶರಿಯಾತ್ ಮಾತನಾಡಿದರು. ಆದರೆ, ನಾನು ಪತಿಯ ನಿರ್ಧಾರವನ್ನು ವಿರೋಧಿಸಿದೆ ಎಂದು ತಿಳಿಸಿದ್ದಾಳೆ. 
 
ಇದರಿಂದ ಆಕ್ರೋಶಗೊಂಡ ಪತಿ ಜಾವೇದ್ ನನ್ನನ್ನು ಕೋಣೆಯಲ್ಲಿ ಕೂಡಿಹಾಕಿ ಮತ್ತೆ ಮೂವರು ಎರಡು ಬಾರಿ ಗ್ಯಾಂಗ್‌ರೇಪ್ ಎಸಗಿದರು. ಆ ಸಂದರ್ಭದಲ್ಲಿ  ನಾನು ಎರಡು ತಿಂಗಳ ಗರ್ಭಿಣಿಯಾಗಿದ್ದೆ. ಗ್ಯಾಂಗ್‌ರೇಪ್‌ನಿಂದಾಗಿ ಗರ್ಭದಲ್ಲಿದ್ದ ಮಗುವನ್ನು ಕಳೆದುಕೊಂಡೆ ಎಂದು ಪತ್ನಿ ರುಕ್ಸಾರಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ