‘ಬೋನ್ ಲೆಸ್ ಮಟನ್ ಫ್ರೈ’ ಸಿಂಪಲ್ ಟ್ರಿಕ್ಸ್

ಭಾನುವಾರ, 3 ಜುಲೈ 2022 (11:04 IST)
ಮಾಂಸಾಹಾರಿ ಪ್ರಿಯರಿಗೆ ಚಿಕನ್ ಎಷ್ಟು ಇಷ್ಟವೂ ಹಾಗೇ ಮಟನ್ ಕೂಡ ಇಷ್ಟಪಟ್ಟು ತಿನ್ನುತ್ತಾರೆ.

ಅದರಲ್ಲಿಯೂ ಬೋನ್ ಲೆಸ್ ಮಟನ್ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೇ ವಿತ್ ಬೋನ್ಗಿಂತ ಬೋನ್ ಲೆಸ್ ಮಟನ್ಗೆ ಹೆಚ್ಚು ಬೇಡಿಕೆ ಇದೆ.

ಅದರಲ್ಲಿಯೂ ಇಂದು ನಾವು ಹೇಳಿಕೊಡುತ್ತಿರುವ ‘ಬೋನ್ ಲೆಸ್ ಮಟನ್ ಫ್ರೈ’ ಮಾಡಿದರೆ ಮನೆಯವರೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಅನುಮಾನವಿಲ್ಲ.

ಬೇಕಾಗುವ ಪದಾರ್ಥಗಳು

* ಬೋನ್ ಲೆಸ್ ಮಟನ್ – 1/2 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
* ಅರಿಶಿನ ಪುಡಿ – 1 ಪಿಂಚ್
* ನೀರು – 2 ಕಪ್
* ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್

* ಧನಿಯಾ ಪುಡಿ – 1/2 ಟೀಸ್ಪೂನ್
* ಕಪ್ಪು ಮೆಣಸು ಪುಡಿ – 1/2 ಟೀಸ್ಪೂನ್
* ಗರಂ ಮಸಾಲಾ ಪುಡಿ – 1/4 ಟೀಸ್ಪೂನ್
* ಕರಿಬೇವು – 10 ಎಲೆಗಳು
* ತುಪ್ಪ – 1 ಟೀಸ್ಪೂನ್
* ಎಣ್ಣೆ – 2 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

* ಪ್ರೆಶರ್ ಕುಕ್ಕರ್ಗೆ ಮಟನ್ ಸಣ್ಣ ತುಂಡುಗಳಾಗಿ ಕಟ್ ಮಾಡಿ ಅರಿಶಿನ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನೀರು ಹಾಕಿ ಬೇಯಿಸಿ.

* ಬೇಯಿಸಿದ ಮಟನ್ ಕಡಾಯಿಯಲ್ಲಿ ಬಿಸಿ ಮಾಡಿ. ಅದಕ್ಕೆ ಅರಿಶಿನ ಪುಡಿ ಮತ್ತು 1/4 ಟೀಚಮಚ ಉಪ್ಪನ್ನು ಸೇರಿಸಿ ಬಿಸಿ ಮಾಡಿ
.
* ನಂತರ ಕೆಂಪು ಮೆಣಸಿನ ಪುಡಿ, ಧನ್ಯ ಪುಡಿ, ಕರಿಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ.

* ಮಟನ್ ಮಸಾಲ ಜೊತೆಗೆ ಸರಿಯಾಗಿ ಬೇರೆಯುವವರೆಗೂ ಹುರಿಯಿರಿ. ಈ ಹಂತದಲ್ಲಿ ತುಪ್ಪವನ್ನು ಸೇರಿಸಿ ಮತ್ತು ನಿಧಾನವಾಗಿ ರೋಸ್ಟ್ ಮಾಡಿ 10 ನಿಮಿಷಗಳ ಕಾಲ ಫ್ರೈ ಮಾಡಿ.

* ಕಡಿಮೆ ಉರಿಯಲ್ಲಿ ಬೇಯಿಸುವಾಗ ಸ್ವಲ್ಪ ಎಣ್ಣೆಯನ್ನು ಸೇರಿಸಿ ಹುರಿಯಿರಿ. ಈ ಹಂತದಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ