ಸಸ್ಯಾಹಾರಿ ಸ್ವಾಮಿಗಳಿಗೆಕ್ಕೆ ಮಾಂಸಾಹಾರದ ಚಿಂತೆ -ಸಾಮಾಜಿಕ ಜಾಲತಾಣಗಳಲ್ಲಿ ನೇಟಿಗರ ಪ್ರಶ್ನೆ

ಶುಕ್ರವಾರ, 1 ಏಪ್ರಿಲ್ 2022 (18:04 IST)
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲಾಲ್‌ ದಂಗಲ್‌ ಜೋರಾಗಿ ಬೀಸುತ್ತಿದೆ. ಈ ನಡುವೆ ಮಾಂಸವನ್ನೇ ತಿನ್ನದ ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಮಾಂಸಹಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾದ ವೇಳೆಯಲ್ಲಿ ಮೊಟ್ಟೆ ನೀಡದಂತೆ ರಾಜ್ಯ ಸರ್ಕಾರದ ವಿರುದ್ದ ತೀವ್ರ ಪ್ರಮಾಣ ದಲ್ಲಿ ಪ್ರತಿಭಟನೆ ನಡೆಸಿ ಮೊಟ್ಟೆ ಮಾಂಸಹಾರ ಎನ್ನುವಂತೆ ಬಿಂಬಿಸಿದರು.
ಮೊಟ್ಟೆ ಬೇಡ ಅಂತ ಹೇಳಿದವರು ಇಂದು ಇಂತದೇ ಮಾಂಸ ತಿನ್ನಿ ಅಂತ ಹೇಳುತ್ತಿರುವುದು ಯಾಕೆ ಅನ್ನೋ ಮಾತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ನಾವು ನಮ್ಮ ತಟ್ಟೆಯಲ್ಲಿ ಏನು ಇಟ್ಟುಕೊಳ್ಳಬೇಕು ಇಟ್ಟುಕೊಳ್ಳಬಾರದು ಎನ್ನುವುದನ್ನು ನಿರ್ಧಾರ ಮಾಡುವುದಕ್ಕೆ ಸ್ವಾಮೀಜಿಗಳು, ಹಿಂದೂ ಪರ ಕಾರ್ಯಕರ್ತರು ಯಾರು ಅಂತ ಹಲವು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ