ವಿಜೇಂದರ್‌ಗೆ ಸ್ಪೀಕರ್ ಚಟರ್ಜಿ ಅಭಿನಂದನೆ

ಶುಕ್ರವಾರ, 22 ಆಗಸ್ಟ್ 2008 (21:12 IST)
ಬೀಜಿಂಗ್ ಒಲಿಂಪಿಕ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ವಿಜೇಂದರ್ ಕುಮಾರ್‌ಗೆ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಅಭಿನಂದನೆ ಸಲ್ಲಿಸಿದ್ದು, ವಿಜೇಂದರ್ ಐತಿಹಾಸಿಕ ಗೆಲುವಿನಿಂದ ದೇಶದ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶದ ಬಾಕ್ಸಿಂಗ್‌ ವಿಭಾಗದಲ್ಲಿ ಪ್ರಥಮ ಬಾರಿಗೆ ಪದಕ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವ ವಿಜೇಂದರ್ ಅಭಿನಂದನಾರ್ಹರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಚಟರ್ಜಿ, ಹರ್ಯಾಣ ಬಾಕ್ಸರ್‌ನ ಈ ಸಾಧನೆ ದೇಶದ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದರು.

ಅಲ್ಲದೇ ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗಳಿಸಿದ ಅಭಿನವ್ ಬಿಂದ್ರಾ, ಕಂಚಿನ ಪದಕ ಪಡೆದ ಸುಶೀಲ್ ಕುಮಾರ್ ಹಾಗೂ ವಿಜೇಂದರ್ ಕೂಡ ದೇಶದ ಮಕ್ಕಳು, ಯುವಕರಿ ಗೆ ಮಾದರಿ ವ್ಯಕ್ತಿಗಳಾಗಿದ್ದಾರೆ ಎಂದು ಚಟರ್ಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ