ಅಫ್ಘಾನ್ 'ಕಂಚಿ'ನ ವಿಜೇತನಿಗೆ ಕಾರು,ಬಂಗ್ಲೆ ಕೊಡುಗೆ..

ಗುರುವಾರ, 21 ಆಗಸ್ಟ್ 2008 (21:05 IST)
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟೆಕವಾಂಡೋ ಆರ್ಟ್ ಮಾರ್ಷಲ್ ಕರಾಟೆ ಸ್ಪರ್ಧೆಯಲ್ಲಿ ಅಫ್ಘಾನಿಸ್ತಾನದ ರೊಹುಲ್ಲಾ ನಿಕ್‌‌ಪೈ ಅವರು ಕಂಚಿನ ಪದಕ ಪಡೆ ಯುವ ಮೂಲಕ ದೇಶದ ಮಾನ ಕಾಪಾಡಿದ್ದು,ಈ ನಿಟ್ಟಿನಲ್ಲಿ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ಆತನಿಗೆ ನೂತನ ಮನೆಯನ್ನು ನೀಡುವುದಾಗಿ ಘೋಷಿಸಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರಥಮ ಬಾರಿಗೆ ಪದಕ ಪಡೆದ ಕೀರ್ತಿಗೆ ಭಾಜನರಾಗಿರುವ 21ರ ಹರೆಯದ ರೊಹುಲ್ಲಾ ಅವರು ಬುಧವಾರ ನಡೆದ ಟೆಕವಾಂಡೋ ಆರ್ಟ್ ಮಾರ್ಷಲ್ ಕರಾಟೆ ಸ್ಪರ್ಧೆಯ ಅಂತಿಮ ಕದನದಲ್ಲಿ ಸ್ಪೇಯ್ನ್‌‌ನ ವಿಶ್ವ ಚಾಂಪಿಯನ್ ಜುವಾನ್ ಆಂಟೊನಿಯೋ ರಾಮೋಸ್ ವಿರುದ್ಧ 4-1ರ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಇದೀಗ ಕಂಚಿನ ಪದಕ ವಿಜೇತ ರೊಹುಲ್ಲಾಗೆ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ನೂತನ ಮನೆಯನ್ನು ನೀಡುವುದಾಗಿ ಘೋಷಿಸಿದ್ದರೆ,ಪ್ರಸಿದ್ಧ ವ್ಯಾಪಾರ ಸಂಸ್ಥೆಯೊಂದು ಕಾರೊಂದನ್ನು ನೀಡುವುದಾಗಿಯೂ ಹೇಳಿದೆ.

ರೊಹುಲ್ಲಾ ಅವರ ಸಾಧನೆ ದೇಶದ ಹೆಮ್ಮೆಯ ಪ್ರತೀಕವಾಗಿದೆ ಎಂದು ಅಫ್ಘಾನಿಸ್ತಾನದ ಮಾಧ್ಯಮಗಳು ಬಣ್ಣಿಸಿದ್ದು,ಹಲವಾರು ಖಾಸಗಿ ಚಾನೆಲ್‌ಗಳು ಆತನ ಪದಕ ವಿಜೇತ ಸುದ್ದಿಯನ್ನು ಅಗ್ರ ವಾರ್ತೆಯನ್ನಾಗಿ ಪ್ರಸಾರ ಮಾಡಿದ್ದವು.

ವೆಬ್ದುನಿಯಾವನ್ನು ಓದಿ