ಒಲಿಂಪಿಕ್ಸ್‌ಗೆ ಟರ್ಕಿ ಉಗ್ರರಿಂದ ಬೆದರಿಕೆ

ಶನಿವಾರ, 26 ಜುಲೈ 2008 (13:45 IST)
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದ ವೇಳೆ ಭಯೋತ್ಪಾದನಾ ದಾಳಿ ಬೆದರಿಕೆ ಇರುವ ವೀಡಿಯೋವನ್ನು ಟರ್ಕಿಶ್ ಇಸ್ಲಾಮಿಕ್ ಪಾರ್ಟಿ ಎಂದು ಕರೆದುಕೊಂಡ ತಂಡವೊಂದು ಬಿಡುಗಡೆಗೊಳಿಸಿದ್ದು, ಇತ್ತೀಚಿನ ಚೀನಾದ ಎರಡು ಬಸ್ ಸ್ಫೋಟಗಳಿಗೆ ತಾನೇ ಹೊಣೆ ಎಂಬುದಾಗಿ ಹೇಳಿಕೊಂಡಿದೆ ಎಂದು ಭಯೋತ್ಪಾದನಾ ಪರಿವೀಕ್ಷಣಾ ಸಂಸ್ಥೆಯು ತಿಳಿಸಿದೆ.

'ಅವರ್ ಬ್ಲೆಸ್ಡ್ ಜಿಹಾದ್ ಇನ್ ಯುನಾನ್' ಎಂಬ ಶೀರ್ಷಿಕೆಯನ್ನು ಹೊಂದಿದ ವೀಡಿಯೋವನ್ನು ಈ ತಂಡವು ಬಿಡುಗಡೆಗೊಳಿಸಿರುವುದಾಗಿ ಅಮೆರಿಕ ಮೂಲದ ಭಯೋತ್ಪಾದನಾ ಪರಿವೀಕ್ಷಣಾ ಸಂಸ್ಥೆ ಇಂಟೆಲ್‌ಸೆಂಟರ್ ತಿಳಿಸಿದ್ದು, ಮುಂದಿನ ತಿಂಗಳಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಬೆದರಿಕೆಯೊಡ್ಡಿದ ತಂಡದ ನಾಯಕ ಕಮಾಂಡರ್ ಸೈಫುಲ್ಲಾ ಅವರ ಹೇಳಿಕೆಯನ್ನು ಈ ವೀಡಿಯೋ ಹೊಂದಿದೆ.

ಬೀಜಿಂಗ್‌ನಲ್ಲಿ 29ನೇ ಒಲಿಂಪಿಕ್ಸ್‌ನ್ನು ನಿಲುಗಡೆಗೊಳಿಸುವ ಬಗ್ಗೆ ಅಂತಾರಾಷ್ಟ್ರೀಯ ಸಮೂಹಗಳು ಮತ್ತು ಟರ್ಕಿಶ್ ಇಸ್ಲಾಮಿಕ್ ಪಾರ್ಟಿ ಎಚ್ಚರಿಕೆಯನ್ನು ನೀಡುತ್ತಿರುವುದರೊಂದಿಗೆ, ಭಯೋತ್ಪಾದನಾ ಬೆದರಿಕೆಯ ಎಚ್ಚರಿಕೆಯನ್ನೂ ಚೀನೀಯರು ತಳ್ಳಿಹಾಕಿದ್ದಾರೆ ಎಂದು ಸೈಫುಲ್ಲಾ ಅವರನ್ನು ಉಲ್ಲೇಖಿಸಿ ಇಂಟೆಲ್‌ಸೆಂಟರ್ ತಿಳಿಸಿದೆ.

ಒಲಿಂಪಿಕ್ಸ್ ವೇಳೆ ಚೀನಾದ ಪ್ರಧಾನ ನಗರಗಳಲ್ಲಿ ದಾಳಿ ಮಾಡಲು ಸಜ್ಜುಗೊಂಡಿರುವುದಾಗಿ ಸೈಫುಲ್ಲಾ ತಿಳಿಸಿದ್ದು, ವಿಶೇಷವಾಗಿ ಮುಸ್ಲಿಂ ಅಥ್ಲೀಟ್‌ಗಳು ಮತ್ತು ವೀಕ್ಷಕರಿಗೆ ಒಲಿಂಪಿಕ್ಸ್‌ಗೆ ಆಗಮಿಸುವ ತಮ್ಮ ನಿರ್ಧಾರವನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ