ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಮುಷರ್ರಫ್

ಸೋಮವಾರ, 28 ಜುಲೈ 2008 (17:50 IST)
PTI
ಬೀಜಿಂಗ್‌‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನದ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಸೋಮವಾರ ತಿಳಿಸಿವೆ.

ಆಗೋಸ್ಟ್ 8ರಂದು ನಡೆಯಲಿರುವ ಅದ್ದೂರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವಂತೆ ಮುಷ್ ಅವರನ್ನು ಚೀನಾ ಸರಕಾರ ಆಹ್ವಾನಿಸಿದ್ದು,ಈ ಸಂದರ್ಭದಲ್ಲಿ ಅವರು ಪ್ರಪಂಚದ ವಿವಿಧ ಗಣ್ಯರನ್ನು ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಸಿದ್ದಿಕ್ ಹೇಳಿದ್ದಾರೆ.

ಅಲ್ಲದೇ ಅವರು ಚೀನಾದ ಅಧ್ಯಕ್ಷ ಹು ಜಿಂಟಾವೋ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ ಎಂದು ಸಿದ್ದಿಕ್ ತಿಳಿಸಿರುವುದಾಗಿ ಸ್ಥಳೀಯ ವಾರಪತ್ರಿಕೆಯೊಂದರ ವರದಿ ಹೇಳಿದೆ. ಬೀಜಿಂಗ್‌ನ ಒಲಿಂಪಿಕ್ ಗೇಮ್ಸ್‌ನಲ್ಲಿ ಪಾಕಿಸ್ತಾನದಿಂದ ಹಾಕಿ, ಶೂಟಿಂಗ್, ಈಜು ಸೇರಿದಂತೆ ಒಟ್ಟು 35ಮಂದಿ ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ