ಒಲಿಂಪಿಕ್ಸ್: ಕ್ವಾ.ಫೈನಲ್ ತಲುಪಿದ ನಾಲ್ವರಿಗೂ ಡಿಎಸ್‌ಪಿ ಹುದ್ದೆ

ಶನಿವಾರ, 23 ಆಗಸ್ಟ್ 2008 (09:34 IST)
ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಹರಿಯಾಣದ ಬಾಕ್ಸ್‌ರ್‌ಗಳಾದ ವಿಜಯೆಂದರ್ ಕುಮಾರ್, ಜಿತೆಂದರ್ ಕುಮಾರ್ ಮತ್ತು ಅಖಿಲ್ ಕುಮಾರ್ ಮತ್ತು ಕುಸ್ತಿಪಟು ಯೋಗೇಶ್ವರ್ ದತ್ ಅವರುಗಳನ್ನು ಡೆಪ್ಯೂಟಿ ಸೂಪರಿಡೆಂಟ್ ಅಫ್ ಪೊಲೀಸ್ ಆಗಿ ನಿಯೋಜಿಸಲಾಗುವುದು ಎಂದು ಹರಿಯಾಣ ಸರಕಾರ ಘೋಷಿಸಿದೆ.

ಅವರು ಒಲಿಂಪಿಕ್ಸ್‌ನಲ್ಲಿ ಮಾಡಿದ ಪ್ರಮುಖ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ಮೂವರು ಬಾಕ್ಸ್‌ರ್‌ಗಳು ಮತ್ತು ಕುಸ್ತಿಪಟುವನ್ನು ಡಿಎಸ್‌ಪಿ ಆಗಿ ನಿಯೋಜಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಭೂಪಿಂದರ್ ಹೂಡ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬಾಕ್ಸಿಂಗ್ ಕೋಚ್ ಜಗದೀಶ್ ಸಿಂಗ್ ಅವರಿಗೆ ಸರಕಾರ 25ಲಕ್ಷ ನಗದು ಪುರಸ್ಕಾರ ಪ್ರಕಟಿಸಿದೆ. ಹರಿಯಾಣದ ಮೂವರು ಬಾಕ್ಸ್‌ರ್‌‌ಗಳಿಗೂ ಜಗದೀಶ್ ಸಿಂಗ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.

ಬಾಕ್ಸ್‌ರ್‌ಗಳು ಮತ್ತು ಕುಸ್ತುಪಟುವನ್ನು ಡಿಎಸ್‌ಪಿ ಆಗಿ ನಿಯೋಜಿಸುವ ನಿರ್ಣಯದ ಹೊರತಾಗಿ, ಶುಕ್ರವಾರ ಸೆಮಿಫೈನಲ್‌ನಲ್ಲಿ ಸೋಲು ಕಂಡ ವಿಜಯೆಂದರ್‌ಗೆ ಹರಿಯಾಣ ಸರಕಾರ ಈಗಾಗಲೇ 50ಲಕ್ಷ ಪುರಸ್ಕಾರವನ್ನು ಘೋಷಿಸಿದೆ ಮತ್ತು ಜಿತೆಂದರ್ ಕುಮಾರ್, ಅಖಿಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಅವರಿಗೆ ತಲಾ 25ಲಕ್ಷ ಪುರಸ್ಕಾರವನ್ನು ಪ್ರಕಟಿಸಲಾಗಿದೆ.

ವೆಬ್ದುನಿಯಾವನ್ನು ಓದಿ