ಒಲಿಂಪಿಕ್: ಬೋಲ್ಟ್ ಮತ್ತೊಂದು 'ವಿಶ್ವದಾಖಲೆ'

ಒಲಿಂಪಿಕ್ ಕ್ರೀಡಾಕೂಟದಲ್ಲಿ ಬುಧವಾರ ನಡೆದ 200ಮೀಟರ್ ಓಟದಲ್ಲಿ ಜಮೈಕಾದ ಉಸೇನ್ ಬೋಲ್ಟ್ ಅವರು 19.30ಸೆಕೆಂಡ್ಸ್‌‌ಗಳಲ್ಲಿ ಗುರಿ ತಲುಪುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇದರೊಂದಿಗೆ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೋಲ್ಟ್ ಕೊರಳಿಗೆ ಎರಡನೇ ಚಿನ್ನದ ಪದಕ ಅಲಂಕರಿಸಿದಂತಾಗಿದೆ.ಈ ಮೊದಲು 100ಮೀಟರ್‌ನಲ್ಲೂ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕದೊಂದಿಗೆ ವಿಶ್ವದಾಖಲೆ ಬರೆದಿದ್ದರು.

ಇಂದಿನ 200ಮೀಟರ್ ನಾಗಾಲೋಟದಲ್ಲಿ ಜಮೈಕಾದ ಬೋಲ್ಟ್ 19.30ಸೆಕೆಂಡ್ಸ್‌‌ಗಳಲ್ಲಿ ಜಯ ಸಾಧಿಸುವ ಮೂಲಕ ಅಮೆರಿಕದ ಜಾನ್ಸನ್‌ ದಾಖಲೆಯನ್ನು ಮುರಿದಿದ್ದಾರೆ.

1996ರಲ್ಲಿ ಅಟ್ಲಾಂಟಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೆರಿಕದ ದಂತಕಥೆಯಾಗಿದ್ದ ಮೈಕೆಲ್ ಜಾನ್ಸನ್ ಅವರು 200ಮೀಟರ್ ಓಟವನ್ನು 19.32ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದರು.

ಬೋಲ್ಟ್ 200ಮೀ.ಗುರಿ ಸಾಧಿಸುತ್ತಿದ್ದಂತೆಯೇ ಬರ್ಡ್ಸ್ ನೆಸ್ಟ್‌‌ನಲ್ಲಿ ನೆರೆದಿದ್ದ 91ಸಾವಿರ ಪ್ರೇಕ್ಷಕರ ಗಡಣವೇ ಹುಚ್ಚೆದ್ದು ಹರ್ಷೋದ್ಗಾರ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ