ಒಲಿಂಪಿಕ್: 2ನೇ ಸುತ್ತಿನಿಂದ ಶರತ್ ಔಟ್

ಬುಧವಾರ, 20 ಆಗಸ್ಟ್ 2008 (11:12 IST)
ಭಾರತದ ಖ್ಯಾತ ಟೇಬಲ್ ಟೆನಿಸ್ ಪಟು ಅಚಂತಾ ಶರತ್ ಕಮಲ್ ಬುಧವಾರ ಬೆಳಿಗ್ಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಡೆದ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್‌‌ ಸ್ಪರ್ಧೆಯಲ್ಲಿ ಆಸ್ಟ್ರೀಯಾದ ವೆಕ್ಸಿಂಗ್ ಚೆನ್ ವಿರುದ್ಧ ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಶರತ್ ಕಮಲ್ ಎದುರಾಳಿ ಆಸ್ಟ್ರೀಯಾದ ಚೆನ್ ಅವರು ಎರಡನೇ ಸುತ್ತಿನಲ್ಲಿ 11-5, 14-12, 11-2, 8-11 ಮತ್ತು 10-12ರ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಒಲಿಂಪಿಕ್ ಗೇಮ್ಸ್‌ನಿಂದ ಹೊರಬೀಳುವಂತಾಗಿದೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಪುರುಷರ ಸಿಂಗಲ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಎದುರಾಳಿ ಸ್ಪೇಯ್ನ್‌‌ನ ಅಲ್‌‌‌ಫ್ರೆಡೋ ಕಾರ್ನೆರೋಸ್ ಅವರನ್ನು 6-11,12-10,11-8,9-11,11-6,11-7ರ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಚೆನ್ನೈನ ಯುವ ಪ್ರತಿಭೆ ಅಚಂತಾ ಶರತ್ ಕಮಲ್ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಗಳಿಸಿದ್ದರು.ಆ ನಿಟ್ಟಿನಲ್ಲಿ ಒಲಿಂಪಿಕ್ ಗೇಮ್ಸ್‌ನ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಉತ್ತಮ ಆರಂಭದೊಂದಿಗೆ ಮುನ್ನಡೆ ಸಾಧಿಸಿದ್ದರು.

2004ರ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಶರತ್ ಕೇವಲ ವೈಯಕ್ತಿಕವಾಗಿ ಸ್ವರ್ಣ ಪದಕ ಮಾತ್ರ ಪಡೆದಿದ್ದಲ್ಲದೆ,ಭಾರತೀಯ ತಂಡ ಕೂಡ ಟೀಮ್ ಟೈಟಲ್ ಅನ್ನು ಬಾಚಿ ಕೊಂಡಿತ್ತು. ಅದೂ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಶರತ್ ತಂಡ ಭಾರತೀಯರ ಶ್ಲಾಘನೆಗೆ ಪಾತ್ರವಾಗಿತ್ತು.

ವೆಬ್ದುನಿಯಾವನ್ನು ಓದಿ