ಕುಸ್ತಿಪಂದ್ಯ:ಕ್ವಾರ್ಟರ್‌‌ ಫೈನಲ್‌ನಿಂದ ಹೊರಬಿದ್ದ ದತ್

ಮಂಗಳವಾರ, 19 ಆಗಸ್ಟ್ 2008 (12:15 IST)
ಕುಸ್ತಿ ಪಂದ್ಯದ 60ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತದ ಯೋಗೇಶ್ವರ್ ದತ್ತ ಅವರು ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ಜಪಾನ್‌ನ ಕೆನಿಚಿ ಯುಮೋಟೊ ವಿರುದ್ಧ ಪರಾಭವಗೊಳ್ಳುವ ಮೂಲಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮತ್ತೊಂದು ಪದಕದ ನಿರೀಕ್ಷೆ ಹುಸಿಯಾದಂತಾಗಿದೆ.

ಕುಸ್ತಿ ಪಂದ್ಯದ ಹಣಾಹಣಿಯಲ್ಲಿ ಯೋಗೇಶ್ವರ್ ದತ್ತ ಅವರು ಉತ್ತಮ ಆರಂಭ ಕಂಡುಕೊಂಡಿದ್ದು,ಪ್ರಥಮ ಸುತ್ತಿನಲ್ಲೇ 1-0ರ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು.

ಅದೇ ರೀತಿ ದತ್ ಅವರು ಎರಡನೇ ಸುತ್ತಿನಲ್ಲಿ ತಮ್ಮ ಬಲ ಪ್ರದರ್ಶನ ತೋರುವಲ್ಲಿ ವಿಫಲರಾಗುವ ಮೂಲಕ ಎದುರಾಳಿ ವಿರುದ್ಧ 2-1ರ ಅಂತರದಲ್ಲಿ ಹಿನ್ನೆಡೆ ಅನುಭವಿಸುವ ಮೂಲಕ ಕ್ವಾರ್ಟರ್ ಫೈನಲ್‌ನಿಂದ ಹೊರಬೀಳುವಂತಾಗಿದೆ.

ದತ್ ಅವರು ಕುಸ್ತಿ ಪಂದ್ಯದಲ್ಲಿ ಕನಿಷ್ಠ ಕಂಚಿನ ಪದಕವನ್ನಾದರೂ ಗಳಿಸುತ್ತಾರೆಂಬ ನಿರೀಕ್ಷೆ ಹೊಂದಲಾಗಿತ್ತು. ಇದಕ್ಕೂ ಮುನ್ನ ದತ್ ಅವರು ಕಜಕಿಸ್ತಾನದ ಬೌರ್ಚಾನ್ ವಿರುದ್ಧ 3-1ರ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ವೆಬ್ದುನಿಯಾವನ್ನು ಓದಿ