ಕುಸ್ತಿ: ಪ್ರಥಮ ಸುತ್ತಿನಲ್ಲಿ ಸುಶೀಲ್‌ಗೆ ಸೋಲು

ಬುಧವಾರ, 20 ಆಗಸ್ಟ್ 2008 (15:29 IST)
ಪುರುಷರ 66ಕೆ.ಜಿ ಫ್ರಿ ಸ್ಟೈಲ್ ವಿಭಾಗದ ಪ್ರಥಮ ಸುತ್ತಿನಲ್ಲಿ ಭಾರತದ ಫ್ರಿ ಸ್ಟೈಲ್ ಗಾರ್ಪಲ್‌ರ ಸುಶೀಲ್ ಕುಮಾರ್‌ಗೆ, ಉಕ್ರೇನ್‌ನ ಆಂಡ್ರಿ ಸ್ಟಾಡ್ನಿಕ್ ಹೊರನಡೆಯಲು ದಾರಿ ತೋರಿದ್ದಾರೆ.

ಸ್ಟಾಡ್ನಿಕ್ ಒಂದು ಪಾಯಿಂಟ್ ಗಳಿಸುವ ಮೂಲಕ ಉತ್ತಮ ಆರಂಭ ಪಡೆದರು ಆದರೆ ಸುಶೀಲ್ ಬಹು ಬೇಗನೆ ಅಂಕೆಗಳನ್ನು ಸಮಗೊಳಿಸಿಕೊಂಡರು, ಆದರೆ ಪ್ರಬಲರಾಗಿದ್ದ ಸುಶೀಲ್ ಪ್ರತಿಸ್ಪರ್ಧಿ ಮೊದಲನೇ ಸುತ್ತಿನಲ್ಲಿ 2-1ರ ಮುನ್ನಡೆ ಗಳಿಸಿದರು.

ಎರಡನೇ ಸುತ್ತಿನಲ್ಲಿ ಸ್ಟಾಡ್ನಿಕ್ ವೇಗವಾಗಿ 6 ಪಾಯಿಂಟ್ ಗಳಿಸಿಕೊಂಡು ಮುನ್ನಡೆ ಸಾಧಿಸಿದರೆ, ಸುಶೀಲ್ ಯಾವುದೇ ಪಾಯಿಂಟ್ ಗಳಿಸುವಲ್ಲಿ ವಿಫಲರಾದರು.

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್ ತಲುಪುವ ಮೂಲಕ ಸುಶೀಲ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು, ಬೀಜಿಂಗ್‌ನಲ್ಲಿ ಸುಶೀಲ್ ಕುಮಾರ್ ಸ್ಟಾಡ್ನಕ್‌ಗೆ 4-15ರ ದೀರ್ಘ ಅಂತರದಲ್ಲಿ ಶರಣಾಗಿದ್ದಾರೆ.

ವೆಬ್ದುನಿಯಾವನ್ನು ಓದಿ