ಪದಕದ ನಿರೀಕ್ಷೆಯಲ್ಲಿ 'ಕುಮಾರ' ದ್ವಯರು

ಬುಧವಾರ, 20 ಆಗಸ್ಟ್ 2008 (13:15 IST)
ಒಲಿಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ ಕದನದಲ್ಲಿ ಸೋಮವಾರದಂದು ಭಾರತದ ಅಖಿಲ್ ಕುಮಾರ್ ಅವರು ಸೋಲನ್ನನುಭವಿಸುವ ಮೂಲಕ ಕೋಟ್ಯಂತರ ಭಾರತೀ ಯರ ನಿರೀಕ್ಷೆ ಹುಸಿಯಾಗಿದ್ದು,ಇದೀಗ ಬುಧವಾರ ಸಂಜೆ ಮತ್ತೆ ಕುಮಾರ ದ್ವಯರಿಬ್ಬರು ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದು ಪದಕದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ,ಯಾರ ಮಡಲಿಗೆ ಪದಕ ಸೇರಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

20ರ ಹರೆಯದ ಭಾರತದ ಯುವ ಬಾಕ್ಸಿಂಗ್ ಪಟು ಜಿತೇಂದರ್ ಅವರು ಹಣಾಹಣಿಯಲ್ಲಿ ಗೆಲುವು ಸಾಧಿಸಲಿ ಎಂದು ಕೇಂದ್ರ ಕ್ರೀಡಾಸಚಿವ ಎಂ.ಎಸ್.ಗಿಲ್ ಅವರು ಶುಭ ಹಾರೈ ಸಿದ್ದಾರೆ.

ಇಂದು ಸಂಜೆ 4.45ಕ್ಕೆ ಆರಂಭಗೊಳ್ಳಲಿರುವ 51ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಜಿತೇಂದರ್ ಕುಮಾರ್ ಅವರು ಕಳೆದ ವರ್ಷದ ವರ್ಲ್ಡ್ ಚಾಂಪಿಯನ್ ರಷ್ಯಾದ ಜಾರ್ಜಿ ಬಾಲಾಕ್ಸಿನ್ ಅವರನ್ನು ಎದುರಿಸಲಿದ್ದಾರೆ.

ಅಲ್ಲದೇ ಸಂಜೆ 6.15ಕ್ಕೆ ಮತ್ತೊಬ್ಬ ಬಾಕ್ಸರ್ ವಿಜೇಂದರ್ ಕುಮಾರ್ ಅವರು 75ಕೆಜಿ ವಿಭಾಗದಲ್ಲಿ ಈಕ್ವೆಡಾರ್‌ನ ಕಾರ್ಲೋಸ್ ಗೊಂಗೊರಾ ಅವರೊಂದಿಗೆ ಸೆಣಸಲಿದ್ದಾರೆ.

ವಿಜೇಂದರ್ ಕುಮಾರ್ ಅವರು 2006ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಇದೀಗ ಬುಧವಾರ ಸಂಜೆಯ ಬಾಕ್ಸಿಂಗ್ ಕದನದಲ್ಲಿ ಪದಕ ಯಾರ ಕೊರಳನ್ನು ಅಲಂಕರಿಸಲಿದೆ ಎಂಬ ಕುತೂಹಲ ಭಾರತೀಯರ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.

ವೆಬ್ದುನಿಯಾವನ್ನು ಓದಿ