ಅಮೆರಿಕದ ಖ್ಯಾತ ಬೀಚ್ ವಾಲಿಬಾಲ್ ಆಟಗಾರ್ತಿಯರಾದ ಮಿಸ್ಟಿಮೇ-ಟ್ರಿನೊರ್ ಮತ್ತು ಕೆರ್ರಿ ವಾಲ್ಷ್ ಅವರು ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಗುರುವಾರ ನಡೆದ ಮಹಿಳೆಯರ ಬೀಚ್ ವಾಲಿಬಾಲ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ.
ಬೀಜಿಂಗ್ನ ವಾಲಿಬಾಲ್ ಅಂಗಳದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಅಮೆರಿಕ ಚೀನಾವನ್ನು 21-18,21-18ರ ಅಂಕಗಳಿಂದ ಸೋಲಿಸಿತು.
ಬೀಚ್ ವಾಲಿಬಾಲ್ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದ್ದ ಚೀನಾ-ಅಮೆರಿಕ ತಂಡಗಳ ಗೆಲುವಿಗಾಗಿ ಭಾರೀ ಪೈಪೋಟಿ ನಡೆದು,ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ಪ್ರಥಮ ಸೆಟ್ನಲ್ಲಿ ಅತ್ಯುತ್ತಮ ಶಾಟ್ಗಳನ್ನು ಹೊಡೆದ ಅಮೆರಿಕ 21-18ರಿಂದ ಗೆದ್ದುಕೊಂಡಿತು. ನಂತರ ದ್ವಿತೀಯ ಸೆಟ್ನಲ್ಲಿ ಪೈಪೋಟಿ ನೀಡಲು ಮುಂದಾದ ಚೀನಾವನ್ನು ಅಮೆರಿಕ ಸದೆ ಬಡಿದು,ಪ್ರಥಮ ಮೂರು ಪಾಯಿಂಟ್ಗಳನ್ನು ತನ್ನ ಬಗಲಿಗೇರಿಸಿಕೊಂಡಿತು.
ಕೊನೆಗೂ ಅಮೆರಿಕ ಚೀನಾವನ್ನು 21-18ರಿಂದ ಸೋಲಿಸಿತು. ಇದರಿಂದ ಅಮೆರಿಕ ಡ್ರೀಮ್ ಟೀಮ್ ಬೀಚ್ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಸ್ವರ್ಣ ಪದಕವನ್ನು ತನ್ನ ಮುಡಿಗೇರಿಸಿಕೊಂಡಿತು.