ಬೀಜಿಂಗ್: ತಿಯಾನಾಮನ್ ಸ್ಕ್ವಾರ್‌‌ನಲ್ಲಿ ಬಿಗಿ ಬಂದೋಬಸ್ತ್

ಬುಧವಾರ, 30 ಜುಲೈ 2008 (15:52 IST)
ಒಲಿಂಪಿಕ್ ಮಹಾನ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಆ ನಿಟ್ಟಿನಲ್ಲಿ ಚೀನಾ ಅತೀ ಸೂಕ್ಷ್ಮ ಪ್ರದೇಶವಾದ ತಿಯಾನಾಮನ್ ಸ್ಕ್ವಾರ್ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್‌‌ಗೆ ಏರ್ಪಡಿಸಿರುವುದಾಗಿ ರಾಜ್ಯದ ಮಾಧ್ಯಮ ವರದಿ ಬುಧವಾರ ತಿಳಿಸಿದೆ.

ತಿಯಾನಾಮನ್ ಸ್ಕ್ವಾರ್ ಅನ್ನು ಒಳ ಪ್ರವೇಶಿಸುವ ಮುನ್ನ ಎಲ್ಲಾ ಪ್ರವಾಸಿಗರನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸ್ಕ್ವಾರ್ ಮ್ಯಾನೇಜ್‌‌ಮೆಂಟ್ ಸಮಿತಿಯ ಜಿಯಾ ಯಿಂಗ್ಟಿಂಗ್ ಅವರು ಹೇಳಿರುವುದಾಗಿ ಸ್ಥಳೀಯ ಸುದ್ದಿಸಂಸ್ಥೆಯ ವರದಿ ವಿವರಿಸಿದೆ.

ತಿಯಾನಾಮನ್ ಸ್ಕ್ವಾರ್‌‌ನ ನೆಲಮಹಡಿಯಿಂದ ಪ್ರವೇಶ ದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಯಾ ತಿಳಿಸಿದ್ದಾರೆ.

ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ನಾವು ತಪಾಸಣಾ ಕಾರ್ಯವನ್ನು ಮತ್ತಷ್ಟು ಬಲಗೊಳಿಸುವುದಾಗಿ ಹೇಳಿದರು.

1989ರಲ್ಲಿ ತಿಯಾನಾಮನ್ ಸ್ಕ್ವಾರ್‌‌ನಲ್ಲಿ ವಾರಗಳ ಕಾಲ ಪ್ರಜಾಪ್ರಭುತ್ವ ಪರ ಹೋರಾಟ ನಡೆದಿತ್ತು, ಆ ಸಂದರ್ಭದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಕಮ್ಯೂನಿಷ್ಟ್ ಆಡಳಿತದ ಚೀನಾದಲ್ಲಿ ತಿಯಾನಾಮನ್ ಸ್ಕ್ವಾರ್‌ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.

ವೆಬ್ದುನಿಯಾವನ್ನು ಓದಿ