ಮಾಧ್ಯಮ ನಿಯಂತ್ರಣ-ಪರಿಸರ: ಐಒಸಿ ಅಜೆಂಡಾ

ಗುರುವಾರ, 31 ಜುಲೈ 2008 (20:13 IST)
ಬೀಜಿಂಗ್: ಒಲಿಂಪಿಕ್ಸ್ ಗೇಮ್ಸ್ ಆರಂಭಕ್ಕೂ ಮುನ್ನ ಮಾಧ್ಯಮ ನಿಯಂತ್ರಣ, ಉದ್ದೀಪನಾ ಮದ್ದು ಸೇವನೆ ಹಾಗೂ ಪರಿಸರ ಕಲುಶಿತ ಪ್ರಮುಖವಾಗಿ ತಲೆದೋರಲಿರುವ ಸಮಸ್ಯೆಯಾಗಲಿದ್ದು, ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿಕಾರಿಗಳು ಅಂತಿಮ ಸುತ್ತಿನ ಮಾತುಕತೆ ನಡೆಸಿದರು.

ಬೀಜಿಂಗ್ ಒಲಿಂಪಿಕ್‌ನಲ್ಲಿ ಈ ಮೂರು ಅಂಶಗಳು ಪ್ರಮುಖ ವಿಷಯವಾಗಿದ್ದು, ಇವುಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿರುವುದಾಗಿ ಐಒಸಿ ಅಧ್ಯಕ್ಷ ಜಾಕಸ್ ರೋಗ್ಗೆ ಅವರು ತಿಳಿಸಿದ್ದಾರೆ.

ಅಲ್ಲದೇ ಈ ಮಹಾನ್ ಕ್ರೀಡಾಕೂಟಕ್ಕೆ ಭಯೋತ್ಪಾದಕರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುಮಾರು ಸ್ಥಳೀಯ ಪೊಲೀಸ್, ಕಮಾಂಡೋಸ್ ಮತ್ತು ಕಾರ್ಯಕರ್ತರು ಸೇರಿ 5ಲಕ್ಷ ಮಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಬೀಜಿಂಗ್ ಒಲಿಂಪಿಕ್ ಗೇಮ್ಸ್‌ನ ವರದಿಯನ್ನು ನೀಡದಂತೆ ಇಂಟರ್ನೆಟ್ ಮೇಲೆ ಹೇರಿದ್ದ ನಿಯಂತ್ರಣವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಪತ್ರಕರ್ತರಿಗೆ ಐಒಸಿ ಮಾಧ್ಯಮ ಆಯೋಗ ಭರವಸೆ ನೀಡಿದೆ.

ಅದೇ ರೀತಿ ಒಲಿಂಪಿಕ್ಸ್ ಗೇಮ್ಸ್ ಅನ್ನು ನೇರಪ್ರಸಾರ ಮಾಡಲು ಅನುಮತಿ ನೀಡುತ್ತಾರೆಯೇ ಎಂಬ ಕುರಿತಾಗಿಯೂ ಟಿವಿ ಚಾನೆಲ್‌ಗಳು ಐಒಸಿಯತ್ತ ದೃಷ್ಟಿ ನೆಟ್ಟಿವೆ.

ವೆಬ್ದುನಿಯಾವನ್ನು ಓದಿ