ಮ್ಯಾರಥಾನ್‌‌ ಈಜು ಸ್ಪರ್ಧೆಯಲ್ಲಿ ರಷ್ಯಾಕ್ಕೆ ಸ್ವರ್ಣ

ಬುಧವಾರ, 20 ಆಗಸ್ಟ್ 2008 (21:16 IST)
ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರ 10ಕಿ.ಮೀ.ಮ್ಯಾರಥಾನ್ ಈಜು ಸ್ಪರ್ಧೆಯಲ್ಲಿ ರಷ್ಯಾದ ಲರಿಸಾ ಇಚೆಂಕೋ ಅವರು ಗೆಲುವು ಸಾಧಿಸುವ ಮೂಲಕ ಸ್ವರ್ಣಪದಕವನ್ನು ಗಳಿಸಿದ್ದಾರೆ.

ರಷ್ಯಾದ ಇಚೆಂಕೋ ಅವರು ಮಹಿಳೆಯರ 10ಕಿ.ಮೀ.ಈಜು ಸ್ಪರ್ಧೆಯಲ್ಲಿ 1:59:27.7ಸೆಕೆಂಡುಗಳಲ್ಲಿ ಪ್ರಥಮವಾಗಿ ಈಜಿ ದಡ ಸೇರುವ ಮೂಲಕ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದರು. ಇದರಿಂದ 10ಕಿ.ಮೀ.ಮ್ಯಾರಥಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ರಷ್ಯಾದ ಪಾಲಾಯಿತು.

ಗ್ರೇಟ್ ಬ್ರಿಟನ್‌ನ ಕೆರಿ ಪಾಯ್ನೆ ಅವರು ಕೇವಲ 2ಸೆಕೆಂಡ್‌ಗಳ ಅಂತರದಿಂದ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಗೆದ್ದರು. ಆನ್ನೆ ಅವರು 1:59:29.2ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕೆಸ್ಸಂದ್ರ ಪಟ್ಟೆನ್ ಅವರು 1:29:31 ಸೆಕೆಂಡುಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ವೆಬ್ದುನಿಯಾವನ್ನು ಓದಿ