ಲಂಡನ್ ಒಲಿಂಪಿಕ್ಸ್‌ನತ್ತ ಸೈನಾ ಚಿತ್ತ

ಬುಧವಾರ, 20 ಆಗಸ್ಟ್ 2008 (12:13 IST)
PTI
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದ ಟೆನಿಸ್ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನ್ನನುಭವಿಸಿರುವ ಭಾರತದ ಸೈನಾ ನೆಹ್ವಾಲ್,2012ರಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಗೇಮ್ಸ್‌ನಲ್ಲಿ ಸ್ವರ್ಣ ಪಡೆಯುತ್ತ ದೃಷ್ಟಿ ನೆಟ್ಟಿರುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ನಾನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲುವ ಮೂಲಕ ಸೆಮಿ ಫೈನಲ್ ಅವಕಾಶದಿಂದ ವಂಚಿತಳಾಗಿರುವುದು ತನಗೆ ತುಂಬಾ ನಷ್ಟವಾಗಿರುವುದಾಗಿ ಹೇಳಿರುವ ಸೈನಾ,ತನಗೆ ಆಟದಲ್ಲಿ ಅನುಭವವಿದೆ. ಆ ನಿಟ್ಟಿನಲ್ಲಿ ನಾನು ಕೆಲವು ಮ್ಯಾಚ್‌ಗಳಲ್ಲಿ ಪರಾಜಯಗೊಂಡಿದ್ದರು ಕೂಡ ತನ್ನ ಪದಕ ಬೇಟೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಇದು ತನ್ನ ಪ್ರಥಮ ಒಲಿಂಪಿಕ್ ಸ್ಪರ್ಧೆಯಾಗಿದ್ದು,ತನ್ನ ಕನಸು ಇಲ್ಲಿಗೆ ಕೊನೆಗೊಳ್ಳುವುದಿಲ್ಲ,ಕ್ವಾರ್ಟರ್ ಫೈನಲ್ ತಲುಪಿರುವುದು ಕೂಡ ತನ್ನಲ್ಲಿ ವಿಶ್ವಾಸ ತುಂಬಿದೆ. ಒಲಿಂಪಿಕ್‌ನಲ್ಲಿ ನಾನು ಉತ್ತಮ ಪ್ರದರ್ಶನವನ್ನೇ ನೀಡಿರುವೆ. ಇದು ತನಗೆ ಮುಂದಿನ ಗೇಮ್ಸ್‌ಗೆ ಪಾಠವಾಗಿದೆ ಎಂದರು.

ಖಂಡಿತವಾಗಿಯೂ ನಾನು ಮುಂದಿನ ಒಲಿಂಪಿಕ್ ಕ್ರೀಡೂಕೂಟದಲ್ಲಿ ಚಿನ್ನ ಪಡೆಯುವೆನೆಂಬ ಭರವಸೆ ಇರುವುದಾಗಿ ಸೈನಾ ತಿಳಿಸಿದ್ದು,ಅದು ತನ್ನ ಗುರಿಯೂ ಹೌದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ