ಶೂಟಿಂಗ್: ಪದಕದ ನಿರೀಕ್ಷೆಯಲ್ಲಿ ಮಕ್ತೂಮ್

ಗುರುವಾರ, 31 ಜುಲೈ 2008 (20:34 IST)
ಒಲಿಂಪಿಕ್ ಕ್ರೀಡಾಕೂಟದ ಪುರುಷರ ವಿಭಾಗದ ಶೂಟಿಂಗ್ ಸ್ಪರ್ಧೆಯಲ್ಲಿ ಯುಎಇನ ಅಲ್ ಮಕ್ತೂಮ್ ಅವರು ಚಿನ್ನದ ಪದಕವನ್ನು ಪಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ.

2004ರ ಅಥೆನ್ಸ್ ಒಲಿಂಪಿಕ್ ಕೂಟದ ಪುರುಷರ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ಗಳಿಸಿದ್ದ ಅಲ್ ಮಕ್ತೂಮ್ ಅವರು ಈ ಬಾರಿಯ ಒಲಿಂಪಿಕ್ ಸ್ಪರ್ಧೆಯಲ್ಲಿ ಎದುರಾಳಿಗಳ ವಿರುದ್ಧ ಸೆಣಸಾಟಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಯುಎಇನ 44ವರ್ಷ ಪ್ರಾಯದ ಮುಕ್ತೂಮ್ ಅಥೆನ್ಸ್‌ನಲ್ಲಿ ಭಾರತದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದರು.

ತಾನು ಈ ಬಾರಿಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕವನ್ನು ಜಯಿಸುವ ನಿಟ್ಟಿನಲ್ಲಿ ಕಠಿಣ ಅಭ್ಯಾಸ ಮಾಡಿರುವುದಾಗಿ ಮಕ್ತೂಮ್ ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ