ಸುಶೀಲ್‌ಗೆ ಶುಭಾಶಯ-ನಗದು ಬಹುಮಾನದ ಮಹಾಪೂರ

ಬುಧವಾರ, 20 ಆಗಸ್ಟ್ 2008 (21:06 IST)
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬುಧವಾರ ನಡೆದ 66 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್ ಅವರು ಕಂಚಿನ ಪದಕ ಗಳಿಸುವ ಮೂಲಕ ತಾಯ್ನಾಡಿನಲ್ಲಿ ಹರ್ಷ,ಸಂಭ್ರಮ ಒಂದೆಡೆಯಾದರೆ,ಮತ್ತೊಂದೆಡೆ ಶುಭಾಶಯಗಳ ಮಹಾಪೂರ,ನಗದು ಬಹುಮಾನಗಳ ಘೋಷಣೆಯೊಂದಿಗೆ ಶ್ಲಾಘನೆಗೆ ಒಳಗಾಗಿದ್ದರೆ.

ಕುಸ್ತಿ ಹಣಾಹಣಿಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಭಾರತೀಯರಲ್ಲಿ ರೋಮಾಂಚನ,ರಾಷ್ಟ್ರಪತಿ ಪ್ರತಿಭಾ ಪಾಟೀಲ್,ಪ್ರಧಾನಿ ಡಾ.ಮನಮೋಹನ್ ಸಿಂಗ್,ಭಾರತೀಯ ಒಲಿಪಿಕ್ ಕ್ರೀಡಾಕೂಟದ ಅಧ್ಯಕ್ಷ ಸುರೇಶ್ ಕಲ್ಮಾಡಿ ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಸುಶೀಲ್‌ಗೆ 50ಲಕ್ಷ ರೂಪಾಯಿ ನಗದು ಘೋಷಿಸಿದ್ದಾರೆ. ಅದರಂತೆಯೇ ಹರಿಯಾಣ ಮುಖ್ಯಮಂತ್ರಿ 25ಲಕ್ಷ, ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ 25ಲಕ್ಷ,ಕರ್ನಾಟಕ ಸರ್ಕಾರ 10ಲಕ್ಷ ಸೇರಿದಂತೆ ಎಲ್ಲೆಡೆಯಿಂದ ನಗದು ಬಹುಮಾನ ಸುಶೀಲ್‌‌ ಅವರಿಗೆ ಸಂದಾಯವಾಗತೊಡಗಿದೆ.

ವೆಬ್ದುನಿಯಾವನ್ನು ಓದಿ